"ಸಾ ವಿದ್ಯಾ ಯಾ" ವಿಮುಕ್ತಯೇ ಎಂಬುವುದು ಭಾರತೀಯ ಪರಂಪರೆಯಲ್ಲಿ ಪ್ರಸಿದ್ಧವಾದ ಸೂಕ್ತಿ ವಿದ್ಯಾ ಅಥವಾ ಶಿಕ್ಷಣದ ಉದ್ದೇಶವನ್ನು ಈ ಸೂಕ್ತಿಯಿಂದ ಅರಿಯಬಹುದು ಶಿಕ್ಷಣದ ಉದ್ದೇಶವು ಸಂಕುಚಿತವಾಗಿರಬಾರದು ಅದು ವ್ಯಕ್ತಿಯನ್ನು ಕ್ರಿಯಾಶೀಲ ಗೊಳಿಸಬೇಕು ಸಾಮಾಜಿಕವಾಗಿ ನೈತಿಕವಾಗಿ ಹಾಗೂ ಸಂಸ್ಕೃತಿಕವಾಗಿ ವ್ಯಕ್ತಿಯನ್ನು ಸಮೃದ್ಧಗೊಳಿಸಬೇಕಾಗುತ್ತದೆ ಹಾಗೆಯೇ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸಬೇಕು ಈ ದೆಸೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಶೈಕ್ಷಣಿಕ ವಿಚಾರಗಳು ವಿಚಾರಗಳು ಗಮನಾರ್ಹವಾಗಿವೆ. ಗಾಂಧೀಜಿಯವರು ಬದುಕಿರುವಾಗಲೇ ದಂತಕತೆಯಾಗಿದ್ದವರು ಹಾಗಾಗಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಅವರಿಗೊಂದು ವಿಶಿಷ್ಟ ಸ್ಥಾನವಿದೆ ಅವರು ಆಧುನಿಕ ಭಾರತದ ಶಿಕ್ಷಣ ತಜ್ಞರಲ್ಲಿ ಒಬ್ಬರು.
ಗಾಂಧೀಜಿಯವರು ರಾಷ್ಟ್ರೀಯವಾದವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದ್ದ ಅವರು ಶಿಕ್ಷಣದ ವಿಷಯದಲ್ಲಿ ತಮ್ಮ ವಿಚಾರಗಳನ್ನು ಸಾಂದರ್ಭಿಕವಾಗಿ ಅಭಿವ್ಯಕ್ತಗೊಳಿಸಿದ್ದಾರೆ ಶಿಕ್ಷಣವನ್ನು ಕೇವಲ ಅಕ್ಷರಾಭ್ಯಾಸವೆಂದು ಪರಿಗಣಿಸಬಾರದು ಅಂತ ಹೇಳಿದ್ದಾರೆ ಇನ್ನು ಸಾಕ್ಷರತೆ ಎಂಬುದು ಶಿಕ್ಷಣದ ಆದಿಯೂ ಅಲ್ಲ ಅಂತ್ಯವೂ ಅಲ್ಲ ಅದು ವ್ಯಕ್ತಿಯ ಸಾಮಾಜಿಕ ನೈತಿಕ ಮತ್ತು ಆಧ್ಯಾತ್ಮಿಕ ವಿಕಾಸದ ಸಾಧನವಾಗಿದೆ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅಷ್ಟೇ ಅಲ್ಲ ಶಿಕ್ಷಣ ಕೇವಲ ಔಪಚಾರಿಕ ಜ್ಞಾನದ ಮಾಧ್ಯಮವಾಗಿರದೆ ಅದು ಜೀವನ ದರ್ಶನ ಚಾರಿತ್ರಿ ನಿರ್ಮಾಣ ಹಾಗೂ ಸಾಮಾಜಿಕ ಪರಿವರ್ತನೆಯ ಸಶಕ್ತ ಸಾಧನವಾಗಿದೆ.
ಇನ್ನು ಗಾಂಧೀಜಿಯವರು ಶಿಕ್ಷಣದ ವಿಷಯದಲ್ಲಿ ಸಾಂದರ್ಭಿಕವಾಗಿ ಹೇಳಿದ ವಿಚಾರಗಳನ್ನು ಕ್ರೂಢೀಕರಿಸಿ ಹೇಳುವುದಾದರೆ ಶಿಕ್ಷಣದಿಂದ ಸಾಂಸ್ಕೃತಿಕ ವಾತಾವರಣ ಸೃಷ್ಟಿಯಾಗಬೇಕು ವ್ಯಕ್ತಿಯ ಚಾರಿತ್ರದ ವಿಕಾಸವಾಗಬೇಕು ವ್ಯಕ್ತಿಯ ವ್ಯಕ್ತಿತ್ವವು ಪರಿಪೂರ್ಣವಾಗುವುದರ ಜೊತೆಗೆ ವೇತನ ಮುಕ್ತವಾದ ಸರ್ವಾಂಗ ಸುಂದರ ಸಮಾಜ ನಿರ್ಮಾಣಗೊಳ್ಳಬೇಕು ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ನಾನು ಯಾವಾಗಲೂ ಹೃದಯದ ಸಂಸ್ಕೃತಿ ಹಾಗೂ ಚಾರಿತ್ರ್ಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ ನನ್ನ ದೃಷ್ಟಿಯಲ್ಲಿ ಚಾರಿತ್ರ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ ಅಂತ ಹೇಳಿರುವದುಂಟು. ಗಾಂಧೀಜಿಯವರ ದೃಷ್ಟಿಯಲ್ಲಿ ಶಿಕ್ಷಣದಿಂದ ಬರಿ ಬೌದ್ಧಿಕ ವಿಕಾಸ ಆಗುವುದಾದರೆ ಪ್ರಯೋಜನವಿಲ್ಲ ಬೌದ್ಧಿಕ ವಿಕಾಸದೊಂದಿಗೆ ನಮ್ಮ ಸಕಲ ಇಂದ್ರಿಯಗಳನ್ನು ಸದುಪಯೋಗಪಡಿಸಿಕೊಳ್ಳುವ ಶಿಕ್ಷಣ ಬಹಳ ಮುಖ್ಯ ಇಂದಿನ ಶಿಕ್ಷಣವು ಮನುಷ್ಯನಿಗೆ ಅವನ ಕಣ್ಣು ಕಿವಿ ಮೂಗು ಬಾಯಿ ಕೈಕಾಲುಗಳನ್ನು ಸದುಪಯೋಗ ಮಾಡಿಕೊಳ್ಳುವುದನ್ನ ಕಲಿಸುತ್ತಿಲ್ಲ ಹಾಗಾಗಿ ಗಾಂಧೀಜಿಯವರು ಪ್ರತಿಪಾದಿಸಿರುವುದು ಕಾಯಕ ಕೇಂದ್ರಿತ ಮೌಲ್ಯಧಾರಿತ ಮತ್ತು ಸಮಾಜಮುಖಿ ಶಿಕ್ಷಣವಾಗಿದೆ.