2026-03-07 02:07:50

M S Dhoni | ಸಿಎಸ್‌ಕೆ ನ್ಯೂ ಜೆರ್ಸಿ ಬಿಡುಗಡೆ ಚೆನ್ನೈ ತಲುಪಿದ ಧೋನಿ | Speed News Kannada

M S Dhoni | ಸಿಎಸ್‌ಕೆ ನ್ಯೂ ಜೆರ್ಸಿ ಬಿಡುಗಡೆ ಚೆನ್ನೈ ತಲುಪಿದ ಧೋನಿ | Speed News Kannada

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಹ ಸ್ಥಿರ ಪ್ರದರ್ಶನ ನೀಡುತ್ತಿದೆ. ಮಾರ್ಚ್ 8 ರಂದು ಈ ಟೂರ್ನಿಗೆ ತೆರೆ ಬೀಳಲಿದೆ. ಆ ಬಳಿಕ ಭಾರತದಲ್ಲಿ ಮತ್ತೊಂದು ಕ್ರಿಕೆಟ್ ಹಬ್ಬ ನಡೆಯಲಿದೆ.
ಈ ಕ್ರಿಕೆಟ್ ಹಬ್ಬಕ್ಕೆ ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ಗೆ ಆರಂಭವಾಗಲಿದೆ. ಈ ಲೀಗ್‌ಗಾಗಿ ಈಗಾಗಲೇ ಎಲ್ಲ ತಂಡಗಳು ಭರದ ಸಿದ್ಧತೆಗಳನ್ನು ನಡೆಸಿವೆ.
ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದೆ. ಹೀಗಾಗಿ ತಂಡ ಭರದ ಸಿದ್ಧತೆಯನ್ನು ನಡೆಸಿದೆ. ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಈ ಲೀಗ್‌ನಲ್ಲಿ ಭಾಗವಹಿಸಲು ಮಹೇಂದ್ರ ಸಿಂಗ್ ಧೋನಿ ಫೆಬ್ರವರಿ 28 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಗುಡ್ ಲುಕ್ಕಿಂಗ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಧೋನಿ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದ್ದಾರೆ.
ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ ತಂಡದ ರಾಯಭಾರಿ ಆಗಿರುವ ಧೋನಿ ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಇವರ ನಾಯಕತ್ವದಲ್ಲಿ ಚೆನ್ನೈ ದಾಖಲೆಯ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ಆರನೇ ಪ್ರಶಸ್ತಿಯ ಹುಡುಕಾಟದಲ್ಲಿದೆ. 

ಚೆನ್ನೈ ಜೆರ್ಸಿ ಬಿಡುಗಡೆ
ಇದೇ ಸಂದರ್ಭದಲ್ಲಿ ಸಿಎಸ್‌ಕೆ ಮತ್ತೊಂದು ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಿಎಸ್‌ಕೆ ವಿಭಿನ್ನವಾಗಿ ತನ್ನ ಜೆರ್ಸಿ ಲಾಂಚ್ ಕಾರ್ಯಕ್ರಮವನ್ನು ಮಾಡಿದೆ. 2023ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಸಿಎಸ್‌ಕೆ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಇನ್ನು ಈ ಬಾರಿಯೂ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜಸ್ಥಾನ ರಾಯಲ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿದ್ದ ಸಂಜು ಸ್ಯಾಟ್ಸನ್ ಟಿ20 ವಿಶ್ವಕಪ್‌ನ ಭಾಗವಾಗಿದ್ದಾರೆ. ಹೀಗಾಗಿ ಇವರು ಸದ್ಯ ಅಭ್ಯಾಸದ ಶಿಬಿರದಲ್ಲಿ ಭಾಗವಹಿಸಲು ಆಗುವುದಿಲ್ಲ. ಶಿವಂ ದುಬೆ ಮತ್ತು ಸಂಜು ಸ್ಯಾಟ್ಸನ್ ಪ್ರಸ್ತುತ ರಾಷ್ಟ್ರೀಯ ಕರ್ತವ್ಯದಲ್ಲಿ ನಿರತರಾಗಿದ್ದಾರೆ, ಆದ್ದರಿಂದ ಅವರು ಪಂದ್ಯಾವಳಿಯ ನಂತರ ಶಿಬಿರವನ್ನು ಸೇರುತ್ತಾರೆ. ಈ ಬಗ್ಗೆ ಚೆನ್ನೈ ತಂಡದ ಕಾಸಿ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ಶಿಬಿರದಲ್ಲಿ ಸುಮಾರು 15 ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಹಲವಾರು ಅನ್‌ಕ್ಯಾಪ್ ಮತ್ತು ದೇಶೀಯ ಆಟಗಾರರು ಸೇರಿದ್ದಾರೆ. ಚೆನ್ನೈ ತಂಡದ ಮುಖ್ಯ ಕೋಚ್ ಸ್ಟೀಫನ್ ಫೈಮಿಂಗ್ ಹಾಗೂ ವಿದೇಶಿ ಆಟಗಾರರು ಮುಂದಿನ ವಾರದಲ್ಲಿ ತಂಡವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.

ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗುತ್ತಾ?
44 ವರ್ಷದ ಧೋನಿ, ಈಗಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಇವರು ಯುವಕರು ನಾಚುವಂತೆ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಧೋನಿ ಅವರ ನಿವೃತ್ತಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಇವರನ್ನು ಚೆನ್ನೈ ಅನ್‌ಕ್ಯಾಪ್ ನಿಯಮಗಳ ಅಡಿಯಲ್ಲಿ 4 ಕೋಟಿ ರೂ. ನೀಡಿ ಉಳಿಸಿಕೊಂಡಿದೆ. 19ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ ಪಂದ್ಯಗಳ ಬಳಿಕ ಧೋನಿ ನಿವೃತ್ತಿ ಹೊಂದಬಹುದು ಎಂದು ವರದಿಗಳು ಕೇಳಿ ಬರುತ್ತಿವೆ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.