ಬೆಂಗಳೂರು: ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯ ಬೆನ್ನಲ್ಲೇ ಆಟೋ ಎಲ್ ಪಿಜಿ ದರವೂ ಗಗನಮುಖಿಯಾಗಿದೆ. ಇಂದಿನಿಂದ ಆಟೋ ಎಲ್ ಪಿಜಿ ದರ 5.73 ರೂ. ಏರಿಕೆ ಆಗಿದ್ದು, ಆಟೋ ಚಾಲಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಟೋ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಶುಕ್ರವಾರದವರೆಗೆ ಲೀಟರ್‌ಗೆ 89.35 ರೂ. ಇದ್ದ ಆಟೋ ಎಲ್ ಪಿಜಿ ದರ, ಇಂದಿನಿಂದ 95.08 ರೂಪಾಯಿಗೆ ಏರಿಕೆಯಾಗಿದೆ.
ಖಾಸಗಿ ಎಲ್ ಪಿಜಿ ಬಂಕ್‌ಗಳಲ್ಲಿ ದರ ಏರಿಕೆ ಒಂದೇ ರೀತಿಯಲ್ಲಿ ಇಲ್ಲ. ಒಂದೊಂದು ಬಂಕ್ ನಲ್ಲಿ ಒಂದೊಂದು ದರ ನಿಗದಿಯಾಗಿದೆ. ಇದರಿಂದ ಚಾಲಕರಲ್ಲಿ ಗೊಂದಲವೂ ಹೆಚ್ಚಾಗಿದ್ದು, ಇಂಧನ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರು, ಆಟೋ ದರ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಆಟೋ ಪ್ರಯಾಣ ದರ ಹೆಚ್ಚಳವಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಪ್ರಯಾಣಿಕರು ಆಟೋ ಸಹವಾಸವೇ ಬೇಡ ಎಂದು ಬಿಎಂಟಿಸಿ, ಮೆಟ್ರೋ ಮೊರೆ ಹೋದರೆ ಆಟೋ ಚಾಲಕರ ಪರಿಸ್ಥಿತಿ ಮತ್ತಷ್ಟು ಹೈರಾಣಾಗಲಿದೆ.