2026-06-08 01:29:20

Love is not everything | ಪ್ರೀತಿಯೇ ಎಲ್ಲವೂ ಅಲ್ಲ ಆದರೆ ತ್ರಿಷಾ ಮತ್ತೊಂದು ಪೋಸ್ಟ್ | Speed news kannada

Love is not everything | ಪ್ರೀತಿಯೇ ಎಲ್ಲವೂ ಅಲ್ಲ ಆದರೆ ತ್ರಿಷಾ ಮತ್ತೊಂದು ಪೋಸ್ಟ್ | Speed news kannada

ನಟಿ ತ್ರಿಷಾ ಭಾರತೀಯ ಚಿತ್ರರಂಗದ ಪ್ರಮುಖ ನಟಿ. 2002 ರಲ್ಲಿ ಬಿಡುಗಡೆಯಾದ 'ಮೌನಂ ಪೇಸಿಯಾಥೆ' ಚಿತ್ರದ ಮೂಲಕ ನಟಿ ತ್ರಿಷಾ ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಹಾಗೂ ನಟಿಸಿದ ಮೊದಲ ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ತ್ರಿಶಾ 20 ವರ್ಷಗಳಿಗೂ ಹೆಚ್ಚು ಕಾಲ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರು. ವರ್ಷಂ, ಗಿಲ್ಲಿ ಮತ್ತು ಪೊನ್ನಿಯಿನ್ ಸೆಲ್ವನ್: ಐ ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಹಾಗೆಯೇ ನಟಿ ರಜಿನಿ, ಕಮಲ್, ವಿಜಯ್, ಅಜಿತ್ ಮತ್ತು ಸೂರ್ಯ ಅವರಂತಹ ಪ್ರಮುಖ ನಟರೊಂದಿಗೆ ನಟಿಸಿ ಭೇಷ್ ಅನಿಸಿಕೊಂಡಿದ್ದಾರೆ. ಇತ್ತೀಚೆಗೆ, ವಿಜಯ್ ಅವರ ಪತ್ನಿಯಿಂದ ವಿಚ್ಛೇದನದ ಬಗ್ಗೆ ವದಂತಿಗಳ ನಡುವೆ ತ್ರಿಷಾ ಅವರ ಹೆಸರು ಕೇಳಿ ಬಂದಿತ್ತು. 
ಆ ಬಳಿಕ ತ್ರಿಷಾ ಹಾಗೂ ವಿಜಯ್ ಒಂದು ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಎಲ್ಲದರ ಮಧ್ಯೆ ಇದೀಗ ನಟಿ ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಾಕಿದ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ತ್ರಿಷಾ ಹೇಳಿದ್ದೇನು ಎಂದರೆ "ಪ್ರೀತಿಯೇ ಎಲ್ಲವೂ ಅಲ್ಲ. ಆದರೆ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ. ಎಂದು ನಟಿ ಪೋಸ್ಟ್ ಮಾಡಿದ್ದಾರೆ. ಇನ್ನು ತ್ರಿಷಾ ಮಾಡಿದ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ತ್ರಿಷಾ ತಮ್ಮ ಅತ್ಯಂತ ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಈ ರೀತಿಯಾಗಿ ಪೋಸ್ಟ್ ಹಾಕಿರುವುದು ಎಲ್ಲರ ಗಮನ ಸೆಳೆದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.