2026-04-23 06:13:06

Lakshmi Ajji, who was a star in Reels, passes away | ರೀಲ್ಸ್‌ನಲ್ಲಿ ಹವಾ ಮಾಡಿದ್ದ ಲಕ್ಷ್ಮಿ ಅಜ್ಜಿ ನಿಧನ | Speed news kannada

Lakshmi Ajji, who was a star in Reels, passes away | ರೀಲ್ಸ್‌ನಲ್ಲಿ ಹವಾ ಮಾಡಿದ್ದ ಲಕ್ಷ್ಮಿ ಅಜ್ಜಿ ನಿಧನ | Speed news kannada

ಸಮಾಜಿಕ ಜಾಲತಾಣದಲ್ಲಿ ರೀಲ್ಸ್‌ಗಳ ಮೂಲಕ ಎಲ್ಲರ ಮನಸ್ಸು ಗೆದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹೊಸಹಳ್ಳಿಯ ಲಕ್ಷ್ಮಿ ನಾಯ್ಕ ಅಜ್ಜಿ ವಯೋಸಹಜ ಕಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಮರಿಮೊಮ್ಮಗ ಜೊತೆ ನಟನೆ ಮಾಡುತ್ತಲೇ ಭಾರೀ ಫೇಮಸ್‌ ಆಗಿದ್ದರು. 93 ಇಳಿ ವಯಸ್ಸಿನಲ್ಲೂ ನಮ್ಮ ಮುಗ್ದ ನಟನೆಯ ಮೂಲಕ ಜನರ ಮನಸಲ್ಲಿ ಅಚ್ಚುಳಿದಿದ್ದ ಲಕ್ಷ್ಮಿ ಅಜ್ಜಿ ಸಾವನಪ್ಪಿದ್ದಾರೆ. ಮರಿಮೊಮ್ಮಗ ಡ್ರಾಮಾ ಜೂನಿಯರ್ಸ್ ಸೂರಜ್ ಜೊತೆ ನೂರಾರು ಕಾಮಿಡಿ ರಿಲ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್ ಅಜ್ಜಿ’ ಎಂದೇ ಮನೆ ಮಾತಾಗಿದ್ದರು. ಸದಾ ಕಾಮಿಡಿ ಮಾಡಿಕೊಂಡು ಇರುತ್ತಿದ್ದ ಅಜ್ಜಿ ಇಂದು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಇಂದು ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.