2026-04-24 01:42:58

Kumbh Mela beautys wedding in legal trouble POCSO case against husband | ಕುಂಭಮೇಳದ ಸುಂದರಿ ವಿವಾಹಕ್ಕೆ ಕಾನೂನು ಸಂಕಷ್ಟ ಪತಿ ವಿರುದ್ಧ ಪೋಕ್ಸ್ ಕೇಸ್ | Speed News Kannada

Kumbh Mela beautys wedding in legal trouble POCSO case against husband | ಕುಂಭಮೇಳದ ಸುಂದರಿ ವಿವಾಹಕ್ಕೆ ಕಾನೂನು ಸಂಕಷ್ಟ ಪತಿ ವಿರುದ್ಧ ಪೋಕ್ಸ್ ಕೇಸ್ | Speed News Kannada

ತಿರುವನಂತಪುರಂ: ಇಂಟರ್ನೆಟ್ ಸೆನ್ಸೆಷನ್ ಆಗಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದ್ದ ನಟಿ ಮೊನಾಲಿಸಾ ಭೋಸೆ ಮತ್ತು ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹವು ಈಗ ಗಂಭೀರ ತಿರುವು ಪಡೆದಿದೆ. ಮೊನಾಲಿಸಾ ಅಪ್ರಾಪ್ತ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸ್ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತ ಜೈಲು ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಮಧ್ಯಪ್ರದೇಶದ ಮಹೇಶ್ವರ ಪಟ್ಟಣದ ಮೂಲದ ಮೊನಾಲಿಸಾ ಭೋಸ್ಥೆ, ಪ್ರಯಾಗ್‌ರಾಜ್ ಕುಂಭಮೇಳದ ಸಮಯದಲ್ಲಿ ರುದ್ರಾಕ್ಷಿ ಮತ್ತು ಹೂಮಾಲೆ ಮಾರುತ್ತಿದ್ದ ಫೋಟೋಗಳು ವೈರಲ್ ಆಗುವ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದಳು. ಈ ಖ್ಯಾತಿಯಿಂದಾಗಿ ಆಕೆಗೆ ಮಲಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಚಿತ್ರೀಕರಣದ ಸೆಟ್‌ನಲ್ಲಿ ಫರ್ಮಾನ್ ಖಾನ್ ಜೊತೆ ಪ್ರೇಮಾಂಕುರವಾಗಿ, ಪೋಷಕರ ತೀವ್ರ ವಿರೋಧದ ನಡುವೆಯೂ ಮಾರ್ಚ್ 11ರಂದು ಕೇರಳದ ದೇವಸ್ಥಾನವೊಂದರಲ್ಲಿ ಇಬ್ಬರು ವಿವಾಹವಾಗಿದ್ದರು.
ಮದುವೆಯ ಸಮಯದಲ್ಲಿ ತನಗೆ 18 ವರ್ಷ ತುಂಬಿದೆ ಎಂದು ಮೊನಾಲಿಸಾ ಪೊಲೀಸರಿಗೆ ತಿಳಿಸಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಥಂಪನೂ‌ರ್ ಪೊಲೀಸರು ಆಕೆಗೆ ರಕ್ಷಣೆ ನೀಡಿ ಮದುವೆಗೆ ಅವಕಾಶ ಮಾಡಿಕೊಟ್ಟಿದ್ದರು. ಮಗಳ ಮನವೊಲಿಸಲು ಬಂದಿದ್ದ ತಂದೆ ಜಯಸಿಂಗ್ ಭೋಸ್ಥೆ ಅವರ ಮಾತನ್ನು ಕೇಳದ ಪೊಲೀಸರು ಆಕೆಗೆ 18 ವರ್ಷ ತುಂಬಿರುವುದರಿಂದ ತನ್ನ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿ ಕಳುಹಿಸಿದ್ದರು. ಆದರೆ ಈಗ ಈ ವಯಸ್ಸಿನ ದಾಖಲೆಯೇ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯ ವೇಳೆ, ಮದುವೆಯ ಸಮಯದಲ್ಲಿ ಮೊನಾಲಿಸಾಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ಅಪ್ರಾಪ್ತಯನ್ನು ಮದುವೆಯಾದ ಮತ್ತು ಅಪಹರಿಸಿದ ಆರೋಪದ ಮೇಲೆ ಫರ್ಮಾನ್ ಖಾನ್ ವಿರುದ್ಧ ಮೊನಾಲಿಸಾಳ ಹುಟ್ಟೂರಾದ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಫರ್ಮಾನ್ ಮೇಲೆ ಪೋಕೋ ಸೇರಿದಂತೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.