2026-06-08 03:54:16

Khameneis photo | ಸಿಗರೇಟ್ ಹಚ್ಚಿ ಬೆಂಕಿಯಿಟ್ಟು ಖಮೇನಿ ಫೋಟೋಗೆ ಸಂಭ್ರಮಿಸಿದ ಯುವತಿ | Speed News Kannada

Khameneis photo | ಸಿಗರೇಟ್ ಹಚ್ಚಿ ಬೆಂಕಿಯಿಟ್ಟು ಖಮೇನಿ ಫೋಟೋಗೆ ಸಂಭ್ರಮಿಸಿದ ಯುವತಿ | Speed News Kannada

ಟೆಹ್ರಾನ್: ಇರಾನ್‌ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿರುವ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಖಮೇನಿ ಫೋಟೋಗೆ ಬೆಂಕಿ ಹಚ್ಚಿ ಅದರಲ್ಲಿಯೇ ಸಿಗರೇಟ್ ಹೊತ್ತಿಸಿ ಸಂಭ್ರಮಿಸಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಭಾನುವಾರ ಎಕ್ಸ್ ಪೋಸ್ಟ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಮೊರ್ಟಿಸಿಯಾ ಆಡಮ್ಸ್ ಎಂಬ ಹೆಸರಿನ ಯುವತಿ ಕೆನಡಾದಲ್ಲಿ ನಡೆದ ಇರಾನ್ ಆಡಳಿತ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿರುವುದು ಕಾಣಿಸಿಕೊಂಡಿದೆ. ಮತ್ತೊಂದು ವಿಡಿಯೋದಲ್ಲಿ ಆಕೆ ಖಮೇನಿ ಫೋಟೋವನ್ನು ಸುಟ್ಟು ಹಾಕಿ, ಅದರ ಬೆಂಕಿಯಿಂದಲೇ ಸಿಗರೇಟ್ ಹೊತ್ತಿಸಿಕೊಂಡು ಸೇದುತ್ತಿರುವುದು ಕಾಣಿಸಿಕೊಂಡಿದೆ. ಜೊತೆಗೆ ಆಕಿ ಸುಟ್ಟ ಫೋಟೋಗೆ ಮಧ್ಯದ ಬೆರಳನ್ನು ತೋರಿಸುತ್ತಾ ಆಕ್ರೋಶ ವ್ಯಕ್ತಪಡಿಸಿರುವುದು ಕಾಣಿಸಿಕೊಂಡಿದೆ. ಇರಾನ್ ನಲ್ಲಿ ಸ್ವಾತಂತ್ರ್ಯದ ಸಂಭ್ರಮ - ಖಮೇನಿ ಫೋಟೋಗೆ ಹಚ್ಚಿದ ಬೆಂಕಿಯಿಂದ ಸಿಗರೇಟ್ ಅಂಟಿಸಿಕೊಂಡ ಯುವತಿ!

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.