2026-06-08 01:26:41

KH x RK Movie realise foe Deepavali | ಕಮಲ್ ರಜನೀಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ದೀಪಾವಳಿಗೆ ತೆರೆಗೆ | Speed News Kannada

KH x RK Movie realise foe Deepavali | ಕಮಲ್ ರಜನೀಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ದೀಪಾವಳಿಗೆ ತೆರೆಗೆ | Speed News Kannada

ಕೆಎಚ್‌Xಆರ್‌ಕೆ ಅರ್ಥಾತ್ 'ಕಮಲ ಹಾಸನ್ ಇನ್‌ಟು ರಜನೀಕಾಂತ್'- ಹೀಗೊಂದು ಬ್ರಾಂಡ್ ಈಗ ಸಂಚಲನ ಮೂಡಿಸುತ್ತಿದೆ. 'ತಲೈವರ್ 173' ಎನ್ನುವುದು ಸಿನಿಮಾಗೆ ತಾತ್ಕಾಲಿಕವಾಗಿ ಇಟ್ಟಿರುವ ಶೀರ್ಷಿಕೆ. ಕಮಲ್ ಹಾಸನ್, ರಜನೀಕಾಂತ್ ಇಬ್ಬರೂ ಒಟ್ಟಾಗಿ ನಟಿಸುತ್ತಿರುವ ಸಿನಿಮಾ ಘೋಷಣೆಯಾದ ದಿನದಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಬರೋಬ್ಬರಿ 46 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ತಮಿಳಿನ ತಾರಾ ನಟರನ್ನು ಒಂದೇ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾ ನಿರ್ಮಾಣ ಕಾರ್ಯ ಇನ್ನೂ ಆರಂಭಿಕ ಹಂತದಲ್ಲಿದ್ದು, 2027ರ ದೀಪಾವಳಿ ಹಬ್ಬದ ವೇಳೆಗೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. 'ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ತಾರಾ ನಟರು ಮತ್ತೊಮ್ಮೆ ಜೊತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಸೃಷ್ಟಿಸಬಹುದಾದ ಕ್ರೇಜ್, ಹಣದ ವಹಿವಾಟನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಸಿನಿಮಾ ಮೂಲಗಳು ತಿಳಿಸಿದ್ದಾರೆ. ನೆಲ್ಸನ್ ದಿಲೀಪ್‌ ಕುಮಾರ್ ನಿರ್ದೇಶನದ ಈ ಸಿನಿಮಾವನ್ನು ಗ್ಯಾಂಗ್‌ ಸ್ಟರ್ ಡ್ರಾಮಾ ಹಾಗೂ ಆಯಕ್ಷನ್ ಎಂಟರ್‌ಟೈನರ್ ಎಂದು ಬಿಂಬಿಸಲಾಗಿದೆ.
ಸದ್ಯ, ನಿರ್ಮಾಣ ಸಂಸ್ಥೆಯು ಪ್ರಮುಖ ತಾರಾಗಣ ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡುವಲ್ಲಿ ನಿರತವಾಗಿದೆ. ಇದೇ ಆಗಸ್ಟ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ಪ್ರಿಯಾಂಕಾ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದ್ದು, ಅವರಿಗಾಗಿ ದಿನಾಂಕ ನಿಗದಿಪಡಿಸಲು ನಿರ್ಮಾಪಕರು ನಿರತರಾಗಿದ್ದಾರೆ. ನೆಲ್ಸನ್ ದಿಲೀಪ್‌ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಈ ಸಿನಿಮಾವು, ರಜನಿಕಾಂತ್ ಅವರ ಜೈಲರ್-2 ಮತ್ತು ಕಮಲ್ ಹಾಸನ್ ನಟನೆಯ ಕಲ್ಕಿ 2898 AD ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರೀಕರಣ. ಆರಂಭವಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.