2026-03-07 03:32:50

Kerala Story 2 | ಕೇರಳ ಸ್ಟೋರಿ 2 ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತಿದೆ ಹೈಕೋರ್ಟ್ | Speed News Kannada

Kerala Story 2 | ಕೇರಳ ಸ್ಟೋರಿ 2 ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತಿದೆ ಹೈಕೋರ್ಟ್ | Speed News Kannada

ಕೊಚ್ಚಿ: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳದಲ್ಲಿ ಜನರು ಕೋಮು ಸೌಹಾರ್ದದಲ್ಲಿ ಬದುಕುತ್ತಾರೆ. ಹಾಗಿರುವಾಗ ಕೇರಳದ ಹೆಸರನ್ನು ಬಳಕೆ ಮಾಡುವುದು ಮತ್ತು ಚಿತ್ರವು ನೈಜ ಸಂಗತಿಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ ಕೇರಳ ಸ್ಟೋರಿ 2 ಚಿತ್ರಕ್ಕೆ ನೀಡಲಾದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮೂರು ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಬೆಚು ಕುರಿಯನ್‌ ಥಾಮಸ್ ಅವರು ಈ ಕುರಿತು ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್ ತೆಗೆಯಲು ಸಿದ್ದವಿರುವುದಾಗಿ ನಿರ್ಮಾಪಕ ನ್ಯಾಯಾಲಯಕ್ಕೆ ತಿಳಿಸಿದರು.
ಫೆಬ್ರುವರಿ 27ರಂದು ಬಿಡುಗಡೆಯಾಗಲಿರುವ ಸಿನಿಮಾದ ಪ್ರಮಾಣೀಕರಣದ ಬಗ್ಗೆ ಮತ್ತೆ ಬುಧವಾರ ವಿಚಾರಣೆ ನಡೆಯಲಿದೆ. ತೀರ್ಪಿಗೂ ಮೊದಲು ಚಿತ್ರವನ್ನು ವೀಕ್ಷಿಸಲು ಇಂಗಿತ ವ್ಯಕ್ತಪಡಿಸಿತು. ಈ ಚಿತ್ರವು ಎಲ್ಲ ಮಾನದಂಡಗಳನ್ನು ಅನುಸರಿಸಿದೆಯೇ ಎಂದೂ ಸೆನ್ಸಾರ್ ಮಂಡಳಿಯನ್ನು ಕೋರ್ಟ್ ಪ್ರಶ್ನಿಸಿದೆ.
ಕೇರಳ ಸದ್ಯ, ಗೋಮಾಂಸ, ಹಂದಿಮಾಂಸ; ಇದುವೇ ನಿಜವಾದ ಕೇರಳ ಸ್ಟೋರಿ ಎಂದ ಪ್ರಕಾಶ್ ರಾಜ್ 'ದಿ ಕೇರಳ ಸ್ಟೋರಿ-2' ಸಿನಿಮಾ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್ 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.