2026-04-23 09:17:15

KD The Devil Controversy | ಕೆಡಿ ಸಾಂಗ್ ವಿವಾದ ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ನೂರಾ ಫತೇಹಿ | Speed News Kannada

KD The Devil Controversy | ಕೆಡಿ ಸಾಂಗ್ ವಿವಾದ ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ನೂರಾ ಫತೇಹಿ | Speed News Kannada

ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ ದಿ ವಿಲನ್' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರತಂಡ ಅದ್ದೂರಿಯಾಗಿಯೇ ಪ್ರಚಾರವನ್ನು ಅಧಿಕೃತವಾಗಿ ಆರಂಭ ಮಾಡಿತ್ತು. ಈಗಾಗಲೇ ಸಿನಿಮಾದ ಕೆಲವು ಹಾಡುಗಳನ್ನು ರಿಲೀಸ್ ಮಾಡಿದ್ದರೂ, ನಾಲ್ಕನೇ ಹಾಡಿನ ಮೂಲಕ ಪ್ರಚಾರ ಶುರುವಾಗಿತ್ತು.
ಆದರೆ, ಆರಂಭದಲ್ಲಿಯೇ ಸಿನಿಮಾಗೆ ಹಿನ್ನೆಡೆಯಾಗಿದೆ. ಅದು ಜೋಗಿ ಪ್ರೇಮ್ ಬರೆದ "ಸೆರಗು ಸರ್ಸೆ.." ಅನ್ನೋ ಪೋಲಿ ಸಾಂಗ್.
ಕೆವಿಎನ್ ಸಂಸ್ಥೆ ನಿರ್ಮಾಣದ ಈ ಸಿನಿಮಾ ಕಳೆದ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿತ್ತು. ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಬಾಲಿವುಡ್‌ ದಿಗ್ಗಜರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪ್ರಚಾರ ಭರ್ಜರಿಯಾಗಿಯೇ ಶುರುವಾಗಿತ್ತು.
ಆದರೆ, ಮೊನ್ನೆ ರಿಲೀಸ್ ಮಾಡಿದ "ಸೆರಗು ಸರ್ಸೆ.." ಹಾಡಿನ ಸಾಲುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದವು. ಜೋಗಿ ಪ್ರೇಮ್ ಬರೆದ ಹಾಡು ಹಿಂದಿ ಹಾಗೂ ಕನ್ನಡ ಪ್ರೇಕ್ಷಕರಿಗೆ ಹಿಡಿಸಿಲ್ಲ. ದ್ವಂದ್ವಾರ್ಥವನ್ನು ಸೃಷ್ಟಿಸುವ ಸಾಲುಗಳನ್ನು ಬರೆಯಬಾರದಿತ್ತು ಎಂದು ಜೋಗಿ ಪ್ರೇಮ್ ವಿರುದ್ಧ ಕಿಡಿ ಕಾಡುತ್ತಿದ್ದಾರೆ. ಇದೇ ವೇಳೆ ಈ ಹಾಡಿಗೆ ಹೆಜ್ಜೆ ಹಾಕಿರುವ ನೂರಾ ಫತೇಹಿ ಕೂಡ ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದಿದ್ದಾರೆ.
"ಸ್ನೇಹಿತರೇ ಕಳೆದ ಕೆಲವು ದಿನಗಳಿಂದ ನನ್ನ ಒಂದು ಹಾಡಿನ ಬಗ್ಗೆ ಚರ್ಚೆಯಾಗುತ್ತಿದೆ. ಆ ಬಗ್ಗೆ ನನಗೆ ಗೊತ್ತಿರಲಿಲ್ಲ. ಯಾಕಂದ್ರೆ ಇಲ್ಲಿ ಸರಿಯಾದ ನೆಟ್ವರ್ಕ್ ಇಲ್ಲ. ನನ್ನ ಸ್ನೇಹಿತರೊಬ್ಬರು ನನಗೆ ಈ ಸಂಗತಿಯನ್ನು ತಿಳಿಸಿದರು. ಅದಕ್ಕಾಗಿ ನಾನೀಗ ವಿವಾದವಾಗುತ್ತಿರುವ ಹಾಡಿನ ಬಗ್ಗೆ ಕೆಲವು ಸಮಜಾಯಿಷಿಗಳನ್ನು ಕೊಡುವುದಕ್ಕೆ ಈ ವಿಡಿಯೋವನ್ನು ಮಾಡುತ್ತಿದ್ದೇನೆ" ಎಂದು ಹೇಳಿ ಹಾಡಿನ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. "ಈ ಹಾಡನ್ನು ಮೂರು ವರ್ಷಗಳ ಹಿಂದೆ ಶೂಟ್ ಮಾಡಲಾಗಿದೆ. ಕನ್ನಡ ಭಾಷೆಯಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಇದು ಭಾರತೀಯ ಚಿತ್ರರಂಗದ ಇನ್ನೊಂದು ಇಂಡಸ್ಟ್ರಿ ಸ್ಯಾಂಡಲ್‌ವುಡ್. ನಾನು ಈ ಸಿನಿಮಾವನ್ನು ಒಪ್ಪಿಕೊಂಡಿದ್ದು. ಇದು ಬಿಗ್ ಸಿನಿಮಾ ಅಂತ. ಹಾಗೇ ಸಂಜಯ್ ದತ್ ಅಂತಹ ಐಕಾನಿಕ್ ನಟನೊಂದಿಗೆ ಕೆಲಸ ಮಾಡಬಹುದು ಅಂತ ಈ ಹಾಡು "ನಾಯಕ್ ನಹೀ.. ಕಲ್‌ನಾಯಕ್ ಹೂ ಮೇ" ಹಾಡಿನ ರಿಮೇಕ್ ಎಂದು ನನಗೆ ಹೇಳಲಾಗಿತ್ತು. ನಾನು ಯಾವುದೇ ಹಾಡನ್ನು ಶೂಟ್ ಮಾಡುವಾಗ ಟ್ರಾನ್ಸ್‌ ಲೇಟ್ ಮಾಡುವಂತೆ ಕೇಳಿಕೊಳ್ಳುತ್ತೇನೆ. ಆದರೆ, ನನಗೆ ಹೇಳಿದಾಗ, ಯಾವುದೇ ರೀತಿಯ ಅಸಭ್ಯ ಪದಗಳು ಇರಲಿಲ್ಲ. ಆದರೆ, ನನಗೆ ಕನ್ನಡ ಅರ್ಥ ಆಗದೇ ಇರುವುದರಿಂದ ಅವರು ಏನು ಹೇಳಿದರೋ ಅದನ್ನು ನಂಬಿದ್ದೆ" ಎಂದು ಮೂರು ವರ್ಷದ ಹಿಂದೆ ನಡೆದಿದ್ದನ್ನು ವಿವರಿಸಿದ್ದಾರೆ. "ಆದರೆ, ಈಗ ಅವರು ಹಿಂದಿ ವರ್ಷನ್ ಮಾಡಿದ್ದು, ಡಬ್ಬಿಂಗ್ ಮಾಡಿದ್ದು ಹಾಗೇ ಅಸಂಬಂಧ ಲಿರಿಕ್ಸ್‌ ಬರೆದಿದ್ದು ಅದು ನನಗೆ ಯಾವುದೇ ರೀತಿಯ ಐಡಿಯಾ ಇರಲಿಲ್ಲ. ಅವರು ನನ್ನಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆದಿಲ್ಲ. ನನ್ನನ್ನು ಇವೆಂಟ್‌ಗೆ ಕರೆದಾಗ, ಆ ಹಾಡನ್ನು ಅಲ್ಲಿ ನೋಡಿದೆ. ಆಗ ನನಗೆ ನನ್ನ ಅನುಮತಿ ಇಲ್ಲದೆ ಹಾಡನ್ನು ಮಾಡಿದ್ದು, ನನಗೆ ದೊಡ್ಡ ಸಮಸ್ಯೆಯಂತೆ ಕಂಡಿತ್ತು. ಅವರು ಲಿರಿಕಲ್ ವರ್ಷನ್‌ಗೆ ಅಸಭ್ಯವಾದ ಫೋಟೊವನ್ನು ಬಳಸಿದ್ದರು. ನನ್ನ ಬಗ್ಗೆ ಗೊತ್ತಿದ್ದವರಿಗೆ ಗೊತ್ತು. ನನ್ನ ಎಲ್ಲಾ ಫೋಟೊಗಳಿಗೆ ನಾನೇ ಅನುಮತಿಯನ್ನು ನೀಡುತ್ತೇನೆ. ನನ್ನ ಹಾಗೂ ಸಂಜಯ್ ದತ್ ಅವರ ಫೋಟೊಗಳನ್ನು ಅವರು ಎಐ ನಿಂದ ಸೃಷ್ಟಿ ಮಾಡಲಾಗಿದೆ. ನಾನು ಯಾವಾಗಲೂ ಇದರ ವಿರುದ್ಧವೇ ನಿಂತಿದ್ದೇನೆ."
"ಯಾವಾಗ ಹಿಂದಿ ವರ್ಷನ್ ಪ್ಲೇ ಮಾಡಿದರೋ ನನಗೆ ಏನೋ ಯಡವಟ್ಟು ಆಗಿದೆ ಅನ್ನೋದು ಗೊತ್ತಾಗಿತ್ತು. ಯಾಕಂದ್ರೆ, ನನಗೆ ಹಿಂದಿ ಅರ್ಥ ಆಗುತ್ತೆ. ಆಗ ನಾನು ನಿರ್ದೇಶಕರಿಗೆ ಇದು ಸರಿಯಿಲ್ಲ ಎಂದು ಹೇಳಿದ್ದೆ. ಇದರಿಂದ ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸಬೇಕಾಗುತ್ತೆ ಎಂದು ಹೇಳಿದ್ದೆ. ಆಗಲೇ ನಾನು ನಿರ್ದೇಶಕರಿಗೆ ನನ್ನ ಇಮೇಜ್ ಹಾಗೂ ಗೌರವ ಎರಡೂ ತೆಗಿದಿದ್ದೀರ ಎಂದಿದೆ" ಎಂದು ನೋರಾ ಫತೇಹಿ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.