2026-03-07 03:36:13

Karnataka Board of Film Commerce | ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ | Speed News Kannada

Karnataka Board of Film Commerce | ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ | Speed News Kannada

2026–27 ನೇ ಸಾಲಿನ ಚುನಾವಣೆಯಲ್ಲಿ ಅದ್ಭುತ ಜಯ

ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 2026–27 ನೇ ಸಾಲಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳು.

ಅಧ್ಯಕ್ಷರು
ಹಿರಿಯ ಕಲಾವಿದೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು
ಶ್ರೀಮತಿ ಜಯಮಾಲಾ ರಾಮಚಂದ್ರ ಅವರು – 512 ಮತಗಳೊಂದಿಗೆ ಭರ್ಜರಿ ಜಯ

ಉಪಾಧ್ಯಕ್ಷರು
* ಶ್ರೀ ಸುಂದರಾ ರಾಜ್ – ಉಪಾಧ್ಯಕ್ಷರು (ನಿರ್ಮಾಪಕ ವಲಯ) – 391 ಮತ
* ಶ್ರೀ ಮಂಜು ಕೆ – ಉಪಾಧ್ಯಕ್ಷರು (ವಿತರಕ ವಲಯ)
* ಶ್ರೀ ಕಿಶೋರ್ ಕುಮಾರ್ ಎಂ.ಎನ್ – ಉಪಾಧ್ಯಕ್ಷರು (ಪ್ರದರ್ಶಕ ವಲಯ)

ಗೌರವ ಕಾರ್ಯದರ್ಶಿಗಳು
* ಶ್ರೀ ಗಣೇಶ್ – ಗೌರವ ಕಾರ್ಯದರ್ಶಿ (ನಿರ್ಮಾಪಕರ ವಲಯ)
* ಶ್ರೀ ರಮೇಶ್ ಬಾಬು ಎಂ.ಆರ್ – ಗೌರವ ಕಾರ್ಯದರ್ಶಿ (ವಿತರಕರ ವಲಯ)
* ಶ್ರೀ ಕೆ.ಸಿ. ಅಶೋಕ್ – ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ)

ನವ ಆಯ್ಕೆಯಾದ ಈ ತಂಡವು ಕನ್ನಡ ಚಿತ್ರೋದ್ಯಮದ ಹಿತ, ಏಕತೆ ಮತ್ತು ಅಭಿವೃದ್ಧಿಗೆ ಹೊಸ ಶಕ್ತಿ ತುಂಬಿ, ಮಂಡಳಿಗೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸವಿದೆ.
ಎಲ್ಲಾ ಪದಾಧಿಕಾರಿಗಳಿಗೆ ಮತ್ತೊಮ್ಮೆ ಹೃತ್ಪೂರ್ವಕ ಶುಭಾಶಯಗಳು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.