2026-06-08 01:27:03

Kamal Haasan drops out of election fray|ಚುನಾವಣಾ ಕಣದಿಂದ ಕಮಲ್ ಹಾಸನ್ ಔಟ್|Speed News Kannada

Kamal Haasan drops out of election fray|ಚುನಾವಣಾ ಕಣದಿಂದ ಕಮಲ್ ಹಾಸನ್ ಔಟ್|Speed News Kannada

ತಮಿಳುನಾಡಿನ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ರಾಜಕಾರಣಿ ಕಮಲ್‌ ಹಾಸನ್‌ ಅವರು ತಮ್ಮ ಪಕ್ಷ “ಮಕ್ಕಳ್ ನಿಧಿ ಮಯಂ” ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ನಿರ್ಧಾರಕ್ಕೆ ತಲುಪಿದ್ದಾರೆ. ಮೂರು ವರ್ಷಗಳ ಹಿಂದೆ ಕಮಲ್ ಹಾಸನ್ ಈ ಪಕ್ಷವನ್ನು ಸ್ಥಾಪಿಸಿ ಡಿಎಂಕೆಗೆ ಸವಾಲೆನ್ನಿಸಿರುವುದಾಗಿ ಅಭಿಮತ ವ್ಯಕ್ತಪಡಿಸಿದ್ದರು. ಆದರೆ ಇದೀಗ ತಮ್ಮ ಪಕ್ಷ ಸ್ಪರ್ಧಿಸದ ಹಿನ್ನೆಲೆಯಲ್ಲಿ, ಮುಂಬರುವ ಚುನಾವಣೆಗೆ ಅಭ್ಯರ್ಥಿಗಳಿಂದ ತಲಾ 50,000 ರೂ. ಅರ್ಜಿ ಶುಲ್ಕ ಪಾವತಿಸಿದ್ದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಪದಾಧಿಕಾರಿಗಳು ಈ ಹಣವನ್ನು “ಪಕ್ಷಕ್ಕೆ ನೀಡಿದ ದೇಣಿಗೆ” ಎಂದು ಪರಿಗಣಿಸಿ ಮರುಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು ಸ್ವಪಕ್ಷೀಯ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.ಕಮಲ್ ಹಾಸನ್ ತಮ್ಮ ಪಕ್ಷ ಸ್ಪರ್ಧಿಸದೇ ಇದ್ದರೂ, ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಇದರಿಂದ ಪಕ್ಷದ ಸದಸ್ಯರಲ್ಲೇ ತೀವ್ರ ವಿರೋಧ ಮೂಡಿರುವ ಸ್ಥಿತಿ ನಿರ್ಮಾಣವಾಗಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.