2026-04-23 09:17:58

K N Rajanna | ಎರಡೂ ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಕಾಂಗ್ರೆಸ್ ಗೆ ಅದೃಶ್ಯ ಮತದಾರರಿದ್ದಾರೆ ರಾಜಣ್ಣ ಮಾರ್ಮಿಕ ಹೇಳಿಕೆ | Speed News Kannada

K N Rajanna | ಎರಡೂ ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಕಾಂಗ್ರೆಸ್ ಗೆ ಅದೃಶ್ಯ ಮತದಾರರಿದ್ದಾರೆ ರಾಜಣ್ಣ ಮಾರ್ಮಿಕ ಹೇಳಿಕೆ | Speed News Kannada

ತುಮಕೂರು : ಬಾಗಲಕೋಟೆ ಹಾಗೂ ದಾವಣಗೆರೆ ಬೈ ಎಲೆಕ್ಷನ್ ಅಖಾಡದಲ್ಲಿ ಇವತ್ತು ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದು, ಗೆಲುವಿಗಾಗಿ ಕಾಂಗ್ರೆಸ್ ಹಾಗೂ NDA ಪಕ್ಷಗಳು ತೀವು ಜಿದ್ದಾಜಿದ್ದಿನ ಹಣಾಹಣಿ ನಡೆಸುತ್ತಿವೆ ಈ ನಡುವೆ ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಕಡೆನೂ ನಾವು ಗೆಲ್ಲುತ್ತೇವೆ ಎಂದರು.
ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ಮಾಡಬಹುದು ಮಾಡದೆ ಇರಬಹುದು. ಚುನಾವಣಾ ಫಲಿತಾಂಶಗಳು ಬಂದ ನಂತರ ವಿಸ್ತರಣೆಯಾಗಬಹುದು ಎಂದಿದ್ದಾರೆ. ನನಗೆ ಮಂತ್ರಿ ಸ್ಥಾನ ಬಂದರೆ ಬರ್ತದೆ ಹೋದರೆ ಹೋಗುತ್ತದೆ. ಅದಕ್ಕೆ  ನಾವೇನು ಯೋಚನೆ ಮಾಡುವುದಿಲ್ಲ ಎಂದರು. ಪವ‌ರ್ ಇಸ್ ಪಾಯಿಸನ್ ಅಂತ ಒಂದು ಗಾದೆ ಕೇಳಿದ್ದೀನಿ. ಪಾಯಿಸನ್ ಅನ್ನು ಸರಿಯಾಗಿ ಬಳಸಿದರೆ ಔಷಧಿನೂ ಮಾಡಿಕೊಳ್ಳಬಹುದು. ಈಗ ಕ್ಯಾನ್ಸರ್ ಗೆ ಪಾಯಿಸನ್ ಇಂದಾನೆ ಔಷಧಿ ಮಾಡೋದು ಎಂದ ರಾಜಣ್ಣ, ಹಾಗಾಗಿ ಆ ಪವರ್ ಅನ್ನು ಪಾಯಿಸನ್. ಅದನ್ನು ಬಳಸುದರ ಮೇಲೆ ಅದರ ಪರಿಣಾಮ, ದುಷ್ಪರಿಣಾಮ, ಸತ್ಪರಿಣಾಮಗಳು ಗೊತ್ತಾಗುತ್ತದೆ ಎಂದು ಹೇಳಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.