2026-06-08 06:45:37

John Abraham viral post against Dhurandhar is false|ಧುರಂಧರ್’ ವಿರುದ್ಧ ಗರಂ ಆದ್ರಾ ಜಾನ್ ಅಬ್ರಹಾಂ ವೈರಲ್ ಪೋಸ್ಟ್ ಸುಳ್ಳು| Speed News Kannada

John Abraham viral post against Dhurandhar is false|ಧುರಂಧರ್’ ವಿರುದ್ಧ ಗರಂ ಆದ್ರಾ ಜಾನ್ ಅಬ್ರಹಾಂ ವೈರಲ್ ಪೋಸ್ಟ್ ಸುಳ್ಳು| Speed News Kannada

ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟ ಜಾನ್‌ ಅಬ್ರಹಾಂ ಹೆಸರಿನಲ್ಲಿ ಒಂದು ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಧುರಂಧರ್ 2’ ಬಗ್ಗೆ ಜಾನ್ ಅಬ್ರಹಾಂ ಟೀಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಮೀಮ್‌ನಲ್ಲಿ, ‘ಧುರಂಧರ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ತರಹದ ಸಿನಿಮಾಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತವೆ, ಇಂತಹ ಚಿತ್ರಗಳನ್ನು ನಾನು ನಿರ್ಮಿಸುವುದಿಲ್ಲ ಎಂದು ಜಾನ್ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ.

ಆದರೆ, ಈ ಮಾಹಿತಿಯನ್ನು ಪರಿಶೀಲಿಸಿದಾಗ ಇದು ಸಂಪೂರ್ಣ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಜಾನ್ ಅಬ್ರಹಾಂ ಅವರು ‘ಧುರಂಧರ್’ ಚಿತ್ರದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.ವಾಸ್ತವದಲ್ಲಿ, ಅವರು 2025ರ ಆಗಸ್ಟ್‌ನಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ಛಾವಾ’ ಸಿನಿಮಾಗಳ ಕುರಿತು ಮಾತನಾಡಿದ್ದರು. ಆಗ ಅವರು ಅತಿ-ರಾಷ್ಟ್ರೀಯತೆಯ ಚಿತ್ರಗಳನ್ನು ತಾವು ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ‘ಧುರಂಧರ್’ ಸಿನಿಮಾ ಇನ್ನೂ ಬಿಡುಗಡೆಯಾಗಿರಲಿಲ್ಲ.

ಹೀಗಾಗಿ, ಹಳೆಯ ಸಂದರ್ಶನದ ಹೇಳಿಕೆಗೆ ‘ಧುರಂಧರ್’ ಚಿತ್ರದ ಹೆಸರನ್ನು ಸೇರಿಸಿ ಕಿಡಿಗೇಡಿಗಳು ಈ ಮೀಮ್ ಸೃಷ್ಟಿಸಿರುವುದು ತಿಳಿದುಬಂದಿದೆ. ಯಾವುದೇ ಅಧಿಕೃತ ಮಾಧ್ಯಮಗಳು ಈ ರೀತಿಯ ಹೇಳಿಕೆಯನ್ನು ವರದಿ ಮಾಡಿಲ್ಲ.ಒಟ್ಟಿನಲ್ಲಿ, ‘ಧುರಂಧರ್’ ಚಿತ್ರದ ಬಗ್ಗೆ ಜಾನ್‌ ಅಬ್ರಹಾಂ ಯಾವುದೇ ನಕಾರಾತ್ಮಕ ಹೇಳಿಕೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.