2026-03-07 05:03:01

Job Cuts At The Washington Post | ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಉದ್ಯೋಗ ಕಡಿತ; ಶಶಿ ತರೂರ್‌ ಪುತ್ರ ಸೇರಿ 100 ಉದ್ಯೋಗಿಗಳ ವಜಾ | Speed News Kannada

Job Cuts At The Washington Post | ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಉದ್ಯೋಗ ಕಡಿತ; ಶಶಿ ತರೂರ್‌ ಪುತ್ರ ಸೇರಿ 100 ಉದ್ಯೋಗಿಗಳ ವಜಾ | Speed News Kannada

ನವದೆಹಲಿ:  ಅಮೆರಿಕದ ಜನಪ್ರಿಯ ಪತ್ರಿಕೆ “ದಿ ವಾಷಿಂಗ್ಟನ್‌ ಪೋಸ್ಟ್‌” ಬುಧವಾರ ಕಾಂಗ್ರೆಸ್‌ ಮುಖಂಡ, ಸಂಸದ ಶಶಿ ತರೂರ್‌ ಪುತ್ರ ಇಶಾನ್‌ ತರೂರ್‌ ಸೇರಿದಂತೆ ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. 
ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಇಶಾನ್‌ ತರೂರ್‌ ಅವರು 12 ವರ್ಷಗಳಿಂದ ಕೆಲಸ ಮಾಡುತಿದ್ದರು. ತಮ್ಮನ್ನು ವಜಾಗೊಳಿಸಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದು, "ಎ ಬ್ಯಾಡ್ ಡೇ" ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ರೀಡೆ, ವಾಣಿಜ್ಯ, ವಿದೇಶಿ ಬ್ಯುರೋ ಸ್ಥಳೀಯ ವರದಿಗಾರರು ಸೇರಿದಂತೆ ಅನೇಕ ವಿಭಾಗಗಳ ಪತ್ರಕರ್ತರನ್ನು ಕೆಲಸದಿಂದ ವಜಾಗೊಳಿಸಿದೆ.
ಕೆಲಸ ಕಳೆದುಕೊಂಡ ಅನೇಕ ಪತ್ರಕರ್ತರು "ಜಾಗತಿಕ ಪತ್ರಿಕೋದ್ಯಮಕ್ಕೆ ಕರಾಳ ದಿನ" ಎಂದು ಬಣ್ಣಿಸಿದ್ದಾರೆ. ವಿಶ್ವಖ್ಯಾತಿ ಪಡೆದ ಪತ್ರಿಕೆಯೊಂದು ಈ ರೀತಿ ಏಕಾಏಕಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಶಾನ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ನನ್ನ ಹೃದಯ ಒಡೆದುಹೋಗಿದೆ ಎಂದು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. 12 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದ ನಾವೆಲ್ಲಾ ಈಗ ಭಾರವಾದ ಮನಸ್ಸಿನಿಂದ ಕಚೇರಿಯಿಂದ ಹೊರಬಂದಿದ್ದೇವೆ ಎಂದಿದ್ದಾರೆ.
ಇಶಾನ್‌ ತರೂರ್‌ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಹಿರಿಯ ಅಂಕಣಕಾರರಾಗಿ ಖ್ಯಾತಿ ಗಳಿಸಿದ್ದರು. ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತನ್ನ ತಂದೆ ಶಶಿ ತರೂರ್‌ ಅವರಿಗೆ ಪ್ರಶ್ನೆ ಕೇಳಿ ಗಮನ ಸೆಳೆದಿದ್ದರು.
ಇಶಾನ್‌ ಅವರು 2017ರಲ್ಲಿ ವರ್ಲ್ಡ್‌ವ್ಯೂ ಎಂಬ ಅಂಕಣ ಬರಹವನ್ನು ಆರಂಭಿಸಿ ಖ್ಯಾತಿ ಗಳಿಸಿದ್ದರು. ಇವರ ಬರಹಕ್ಕೆ ಅರ್ಧ ಮಿಲಿಯನ್ ಓದುಗರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.