2026-04-23 03:31:29

JICA signs Rs 6,100 crore loan agreement for Bengaluru Metro Phase 3 | ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ 6,100 ಕೋಟಿ ರೂ. ಸಾಲ ಒಪ್ಪಂದಕ್ಕೆ JICA ಸಹಿ | Speed news kannada

JICA signs Rs 6,100 crore loan agreement for Bengaluru Metro Phase 3 | ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ 6,100 ಕೋಟಿ ರೂ. ಸಾಲ ಒಪ್ಪಂದಕ್ಕೆ JICA ಸಹಿ | Speed news kannada

ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(JICA) ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 3(ಆರೆಂಜ್ ಲೈನ್)ಗಾಗಿ ಕೇಂದ್ರ ಸರ್ಕಾರದೊಂದಿಗೆ 6,100 ಕೋಟಿ ರೂ.ಗಳ ಅಧಿಕೃತ ಅಭಿವೃದ್ಧಿ ಸಹಾಯ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. JICAಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಹಂತ 3(I) 31 ಎತ್ತರದ ನಿಲ್ದಾಣಗಳೊಂದಿಗೆ ಸುಮಾರು 44.65 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣವನ್ನು ಒಳಗೊಂಡಿದೆ. ಈ ಕಾರಿಡಾರ್‌ ಹೊರ ವರ್ತುಲ ರಸ್ತೆಯ ವಿಸ್ತಾರ(ಕಾರಿಡಾರ್ 3-1) ಮತ್ತು ಪಶ್ಚಿಮ ಗ್ರೋತ್ ಕಾರಿಡಾರ್ (ಕಾರಿಡಾರ್ 3-2) ಅನ್ನು ಒಳಗೊಂಡಿವೆ. ಪೂರ್ಣಗೊಂಡ ನಂತರ, ಹೊಸ ಮಾರ್ಗ ವಿಮಾನ ನಿಲ್ದಾಣ ಮಾರ್ಗ ಮತ್ತು ಮಾರ್ಗ 6 ರೊಂದಿಗೆ ಸಂಯೋಜಿಸಲ್ಪಡುತ್ತದೆ. ಇದು ನಗರದ ಸುತ್ತಲೂ ವೃತ್ತಾಕಾರದ ಜಾಲವನ್ನು ರೂಪಿಸುತ್ತಗೆ ಮತ್ತು ವಿಮಾನ ನಿಲ್ದಾಣ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಒಪ್ಪಂದವು ಒಟ್ಟು 6,775 ಕೋಟಿ ರೂ.ಗಳಾಗಿದ್ದು, ಇದನ್ನು ಎರಡು ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆರಂಭದಲ್ಲಿ 6,100 ಕೋಟಿ ರೂ.ಗಳು ಮತ್ತು ಉಳಿದ ಹಣ ಮುಂದಿನ 15 ರಿಂದ 20 ದಿನಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನಂತರ ಹೆಚ್ಚಿನ ಹಣವನ್ನು ಭೂಸ್ವಾಧೀನ ಮತ್ತು ನಂತರದ ಸಿವಿಲ್ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಅವರು ಟಿಎನ್‌ಐಇಗೆ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.