2026-07-23 06:10:49

JDS HD KUMARASWAMY | ನಾನು ಯಾಕೆ ಡಿಕೆ ಹೆಸರು ಹೇಳಲಿಲ್ಲ ಅಂದ್ರೆ ಕುಮಾರಸ್ವಾಮಿ ಹೇಳಿದ್ದೇನು? | SNK

JDS HD KUMARASWAMY | ನಾನು ಯಾಕೆ ಡಿಕೆ ಹೆಸರು ಹೇಳಲಿಲ್ಲ ಅಂದ್ರೆ ಕುಮಾರಸ್ವಾಮಿ ಹೇಳಿದ್ದೇನು? | SNK

ಹಾಸನ: ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ನೆರವೇರಿದ ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆಯ ಮರುದಿನ, ಕುಟುಂಬಸ್ಥರೆಲ್ಲರೂ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ತಾಯಿಯ ಅಗಲಿಕೆಯಿಂದ ಭಾವುಕರಾದ ದೇವೇಗೌಡರಿಗೆ ಮಕ್ಕಳು ಸಮಾಧಾನ ಹೇಳಿದರು. ವೇದಮಂತ್ರಗಳ ಪಠಣದೊಂದಿಗೆ ಪೂಜಾವಿಧಿಗಳು ನಡೆದವು.

ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಾಳೆ ಹಾಲು-ತುಪ್ಪ ಬಿಡುವ ಶಾಸ್ತ್ರ ಹಾಗೂ 11ನೇ ದಿನದ ಉತ್ತರಕ್ರಿಯೆಯ ಕುರಿತು ಕುಟುಂಬದವರು ಚರ್ಚಿಸಿರುವುದಾಗಿ ತಿಳಿಸಿದರು. ತಾಯಿಯ ಅಂತಿಮ ದರ್ಶನಕ್ಕೆ ಆಗಮಿಸಿ ಪ್ರೀತಿ ತೋರಿದ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಕೊನೆಯುಸಿರಿರುವವರೆಗೂ ಜನಸೇವೆ ಮಾಡುವುದಾಗಿ ತಾಯಿಯ ಸಮಾಧಿಯೆದುರು ಶಪಥ ಮಾಡಿದರು.

ಅಂತ್ಯಕ್ರಿಯೆ ಸಮಯದ ತಮ್ಮ ಈ ಭಾಷಣದಲ್ಲಿ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಇದ್ದುದರ ಬಗ್ಗೆ ಹರಿದಾಡುತ್ತಿದ್ದ ಚರ್ಚೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಯಾವುದೇ ರಾಜಕೀಯ ದುರುದ್ದೇಶದಿಂದ ಹಾಗೆ ಮಾಡಿಲ್ಲ, ಅವರ ಹೆಸರು ಹೇಳದೇ ಉಳಿಸಿದ್ದು ಉದ್ದೇಶಪೂರ್ವಕ ಅಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ತಾಯಿಯ ಗುಣಗಾನ ಮಾಡಿ ಗೌರವಿಸಿದ ಮಾಧ್ಯಮಗಳಿಗೂ ಧನ್ಯವಾದ ಅರ್ಪಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.