2026-06-08 01:28:53

jailer married murder convict, a love story in madhyapradesh| ಕೈದಿಯನ್ನೇ ಪ್ರೀತಿಸಿ ಮದುವೆಯಾದ ಜೈಲರ್; ಮ.ಪ್ರ.ದಲ್ಲೊಂದು ಅಪರೂಪದ ಪ್ರೇಮ ಪ್ರಕರಣ Speed News Kannada

jailer married murder convict, a love story in madhyapradesh| ಕೈದಿಯನ್ನೇ ಪ್ರೀತಿಸಿ ಮದುವೆಯಾದ ಜೈಲರ್; ಮ.ಪ್ರ.ದಲ್ಲೊಂದು ಅಪರೂಪದ ಪ್ರೇಮ ಪ್ರಕರಣ Speed News Kannada

ಭೂಪಾಲ್:‌ ಜೈಲಿನಲ್ಲಿದ್ದ ಕೈದಿಯನ್ನೇ ಜೈಲು ಅಧಿಕಾರಿಯೊಬ್ಬರು ಪ್ರೀತಿಸಿಮದುವೆಯಾಗಿರುವ ಪ್ರಕರಣ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮಧ್ಯಪ್ರದೇಶದ ಛತ್ತರ್‌ಪುರ್ ಜಿಲ್ಲೆಯ ಚಾಂಡ್ಲಾದ ಧರ್ಮೆಂದ್ರ ಸಿಂಗ್ ಎಂಬಾತ ಕೊಲೆ ಪ್ರಕರಣವೊಂದರಲ್ಲಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈತನನ್ನೇ  ಪ್ರೀತಿಸಿ ಜೈಲು ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಮದುವೆಯಾಗಿದ್ದಾರೆ.

2007 ರಲ್ಲಿ ಚಾಂಡ್ಲಾದ ರಾಜಕಾರಣಿಯೊಬ್ಬರ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ 2024ರವರೆಗೆ ಧರ್ಮೆಂದ್ರ ಸಿಂಗ್ ಸಾತ್ನಾ ಸೆಂಟ್ರಲ್ ಜೈಲಿನಲ್ಲಿದ್ದ. ಸನ್ನಡತೆ ಆಧಾರದಲ್ಲಿ ಧರ್ಮೆಂದ್ರ ಸಿಂಗ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.

ಬಿಡುಗಡೆಗೂ ಮುನ್ನ ಕೆಲವು ವರ್ಷಗಳ ಹಿಂದೆ ಸಾತ್ನಾ ಜೈಲಿಗೆ ಫೀರೋಜಾ ಖಾತೂನ್ ಉಪ ಜೈಲು ಅಧೀಕ್ಷಕಿಯಾಗಿ ನೇಮಕಗೊಂಡಿದ್ದರು. ಜೈಲಿನಲ್ಲಿ ಫೀರೋಜಾ ಅವರಿಗೆ ವಾರಂಟ್ ವಿಭಾಗದ ಕೆಲಸವನ್ನು ನೀಡಲಾಗಿತ್ತು. ಈ ಕೆಲಸದಲ್ಲಿ ಫೀರೋಜಾ ಅವರಿಗೆ ಧರ್ಮೆಂದ್ರ ಆಗಾಗ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದು ಕ್ರಮೇಣ ಪ್ರೀತಿಗೆ ತಿರುಗಿದೆ. ಇತ್ತೀಚೆಗೆ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಇವರ ವಿವಾಹ ಹಿಂದೂ ಸಂಪ್ರದಾಯದಂತೆ ನೆರವೇರಿದೆ. ಈ ಮದುವೆಗೆ ಫೀರೋಜಾ ಮನೆಯವರ ವಿರೋಧವಿತ್ತು. ಅಂತಿಮವಾಗಿ ಭಜರಂಗದಳದ ಕಾರ್ಯಕರ್ತರು ಈ ಮದುವೆ ಮಾಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.