2026-06-08 04:03:24

Israel attacks two Lebanese towns again|ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್‌ ದಾಳಿ|Speed News Kannada

Israel attacks two Lebanese towns again|ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್‌ ದಾಳಿ|Speed News Kannada

ಇಸ್ರೇಲ್‌ ಜೆಟ್‌ಗಳು ಎರಡು ಲೆಬನಾನ್ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿದೆ. ಆ ಮೂಲಕ ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮಕ್ಕೆ ಸೆಡ್ಡು ಹೊಡೆದಿದೆ. ಲೆಬನಾನ್ ಮೇಲಿನ ದಾಳಿಗಳನ್ನು ಹಿಂತೆಗೆದುಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸೂಚಿಸಿದ್ದಾರೆ. ಆದರೂ, ಲೆಬಲಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ಲೆಬನಾನ್‌ನಲ್ಲಿರುವ ಇರಾನ್‌ನ ಪ್ರಾಕ್ಸಿ ಹೆಜ್ಬೊಲ್ಲಾ ಉತ್ತರ ಇಸ್ರೇಲಿ ಪಟ್ಟಣವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಶುಕ್ರವಾರ ಇಸ್ರೇಲ್-ಲೆಬನಾನ್ ಗಡಿಯ ಸಮೀಪವಿರುವ ಕಿರ್ಯಾತ್ ಶ್ಮೋನಾ ಮತ್ತು ಉತ್ತರ ಇಸ್ರೇಲ್‌ನ ಅಪ್ಪರ್ ಗಲಿಲೀ ಪ್ರದೇಶದ ಮಿಸ್ಗಾವ್ ಆಮ್ ಮೇಲೆ ರಾಕೆಟ್‌ಗಳನ್ನು ಹಾರಿಸಿರುವುದಾಗಿ ಉಗ್ರಗಾಮಿ ಗುಂಪು ಎಚ್ಚರಿಸಿದೆ. ನಮ್ಮ ದೇಶ ಮತ್ತು ನಮ್ಮ ಜನರ ವಿರುದ್ಧ ಇಸ್ರೇಲಿ-ಅಮೆರಿಕನ್ ಆಕ್ರಮಣ ನಿಲ್ಲುವವರೆಗೂ ಈ ಪ್ರತಿಕ್ರಿಯೆ ಮುಂದುವರಿಯುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.