2026-06-08 01:30:04

Iran reacts to US attack 2000 targets attacked | ಅಮೆರಿಕ ದಾಳಿಗೆ ಪತರುಗುಟ್ಟಿದ ಇರಾನ್‌ ನ 2000 ಗುರಿಗಳ ಮೇಲೆ ದಾಳಿ ಯುಎಸ್ ಸೆಂಟ್ರಲ್ | Speed News Kannada

Iran reacts to US attack 2000 targets attacked | ಅಮೆರಿಕ ದಾಳಿಗೆ ಪತರುಗುಟ್ಟಿದ ಇರಾನ್‌ ನ 2000 ಗುರಿಗಳ ಮೇಲೆ ದಾಳಿ ಯುಎಸ್ ಸೆಂಟ್ರಲ್ | Speed News Kannada

ವಾಷಿಂಗ್ಟನ್: ಅಮೆರಿಕ ನಡೆಸುತ್ತಿರುವ ದಾಳಿಗೆ ಇರಾನ್‌ ಪತರುಗುಟ್ಟಿದೆ. ಇರಾನ್‌ ನ ಸುಮಾರು 2,000 ಗುರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಒಂದು ಜಲಾಂತರ್ಗಾಮಿ ನೌಕೆ ಸೇರಿದಂತೆ 17 ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಪ್ರತಿಪಾದಿಸುತ್ತಿದೆ.
ಯುಎಸ್ ಸೆಂಟ್ರಲ್ ಕಮಾಂಡ್‌ನ ಅಡ್ಮಿರಲ್ ಬ್ರಾಡ್ ಕೂಪರ್ ತಮ್ಮ ವಿಡಿಯೊ ಸಂದೇಶದಲ್ಲಿ, ಅರೇಬಿಯನ್ ಕೊಲ್ಲಿ, ಒಮಾನ್ ಕೊಲ್ಲಿ ಅಥವಾ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಒಂದೇ ಒಂದು ಹಡಗು ಸಂಚರಿಸುತ್ತಿಲ್ಲ. ಈಗಾಗಲೇ ಇರಾನ್‌ನ 2,000 ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ. ಇರಾನ್‌‍ನ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದೇವೆ. ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿ, ಲಾಂಚರ್‌ ಹಾಗೂ ಡ್ರೋನ್‌ಗಳನ್ನು ನಾಶಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮೊದಲ ದಿನದ ದಾಳಿಯು 2003ರಲ್ಲಿ ಇರಾಕ್‌ ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ ಆಡಳಿತದ ಮೇಲಿನ ದಾಳಿಗಿಂತಲೂ ದುಪ್ಪಟ್ಟಾಗಿದೆ. ಇಸ್ಲಾಮಿಕ್ ಗಣರಾಜ್ಯ ಇರಾನ್ ಮೇಲಿನ ಆಕ್ರಮಣ ಮುಂದುವರಿಯಲಿದೆ. ಇರಾನ್ ಮೇಲಿನ ದಾಳಿಯಲ್ಲಿ ಅಲ್ಲಿ ಮೃತಪಟ್ಟವರ ಸಂಖ್ಯೆ 787ಕ್ಕೆ ಏರಿಕೆಯಾಗಿದೆ. 
ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ಮುಂದುವರೆಸಿವೆ. ಇದಕ್ಕೆ ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆ ಹಾಗೂ ಮೂಲಸೌಕರ್ಯಗಳನ್ನು ಗುರಿಯಾಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ.
ಮಾತುಕತೆ‌ ಬಂದ್: ಟ್ರಂಪ್
ಇರಾನ್ ನ ವಾಯು ರಕ್ಷಣಾ ವ್ಯವಸ್ಥೆ, ನೌಕಾಪಡೆ ಸೇರಿದಂತೆ ಬಹುತೇಕ ಎಲ್ಲ ವ್ಯವಸ್ಥೆಗಳೂ ನಾಶವಾಗಿವೆ. ಎಲ್ಲವೂ ಕಳೆದುಕೊಂಡ ನಂತರ ಇರಾನ್‌ ಮಾತುಕತೆ ಬಯಸುತ್ತಿದೆ. ಆದರೆ ಕಾಲ ಮಿಂಚಿಹೋಗಿದ್ದು, ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ತೈಲ ಸಾಗಣೆಗೆ ರಕ್ಷಣೆ: ಅಮೆರಿಕ
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಸಾಗಣೆಗೆ ತೀವ್ರ ಅಡಚಣೆ ಎದುರಾಗಿದೆ. ಇದರಿಂದಾಗಿ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಏತನ್ಮಧ್ಯೆ ಇರಾನ್ ಬೆದರಿಕೆಯ ನಡುವೆಯೂ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳನ್ನು ಸಾಗಿಸಲು ಹಾಗೂ ರಕ್ಷಣೆಯನ್ನು ಒದಗಿಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.