2026-06-08 01:30:07

Iran issues another stern warning to America | ಅಮೆರಿಕಾಗೆ ಇರಾನ್ ಮತ್ತೊಂದು ಕಠಿಣ ಎಚ್ಚರಿಕೆ | Speed news kannada

Iran issues another stern warning to America | ಅಮೆರಿಕಾಗೆ ಇರಾನ್ ಮತ್ತೊಂದು ಕಠಿಣ ಎಚ್ಚರಿಕೆ | Speed news kannada

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟು ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕಾಗೆ ಇರಾನ್ ಮತ್ತೊಂದು ಕಠಿಣ ಎಚ್ಚರಿಕೆ ನೀಡಿದೆ. ಅಮೆರಿಕಾ ಹೊರ್ಮುಜ್ ಜಲಸಂಧಿಯನ್ನು  ನಿಯಂತ್ರಿಸಲು ಮುಂದಾದರೆ ಅಮೆರಿಕದ ನೌಕೆಗಳನ್ನು ಕ್ಷಿಪಣಿಗಳ ಮೂಲಕ ಹೊಡೆದುರುಳಿಸುತ್ತೇವೆಂದು ಎಚ್ಚರಿಕೆ ನೀಡಿದೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಮಿಲಿಟರಿ ಸಲಹೆಗಾರರಾದ ಮೊಹ್ಸನ್ ರೆಜೈ ಅಮೆರಿಕಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸಲು ಅಮೆರಿಕಾ ಮುಂದಾಗಿದ್ದೇ ಆದರೆ, ಅವರ ನೌಕೆಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸುವುದಾಗಿ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕವು ಇರಾನ್ ಭೂಮಿ ಮೇಲೆ ದಾಳಿ ನಡೆಸಿದರೆ, ಸಾವಿರಾರು ಅಮೆರಿಕನ್ ಸೈನಿಕರನ್ನು ಕೈದಿಗಳಾಗಿ ಮಾಡಿಕೊಳ್ಳಲಾಗುವುದು ಮತ್ತು ಪ್ರತಿ ಸೈನಿಕನ ಬಿಡುಗಡೆಗೆ ಒಂದು ಶತಕೋಟಿ ಡಾಲರ್ ಬೇಡಿಕೆ ಇಡಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ, ಪ್ರಸ್ತುತ ಜಾರಿಯಲ್ಲಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಲು ನಾವು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.