2026-06-08 03:53:29

Iran, Isrel war|ಹೊರ್ಮುಜ್ ಜಲಸಂಧಿ ಸಂಘರ್ಷ - ₹18 ಕೋಟಿ ಸುಂಕ ವಿಧಿಸಿದ ಇರಾನ್..!|Speed news kannada

Iran, Isrel war|ಹೊರ್ಮುಜ್ ಜಲಸಂಧಿ ಸಂಘರ್ಷ - ₹18 ಕೋಟಿ ಸುಂಕ ವಿಧಿಸಿದ ಇರಾನ್..!|Speed news kannada

ಇರಾನ್‌- ಇಸ್ರೇಲ್‌ ಯುದ್ಧದಿಂದ ಅಪಾರ ನಷ್ಟ ಸಾವು ನೋವುಗಳಾಗಿವೆ ಈಗ ಇದ್ದಕ್ಕೆಲ್ಲಾ ಪರಿಹಾರ ಸಿಗಬೇಕೆಂದು ಇರಾನ್‌ ಈಗ ಹೊಸ ಮಾರ್ಗವನ್ನು ಹುಡುಕಿದೆ. ಇನ್ನೂ ಹೊರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ವ್ಯಾಪಾರಿ ಹಡಗುಗಳಿಗೆ ಇರಾನ್‌ ಈಗ ಸುಂಕ ವಿಧಿಸಲು ನಿರ್ಧರಿಸಿದೆ. ಇನ್ನೂ ಹೊರ್ಮುಜ್‌ ಜಲಸಂಧಿ ಮೂಲಕ ಹಾದುಹೋಗುವ ವ್ಯಾಪಾರಿ ಹಡಗುಗಳಿಗೆ ಇರಾನ್‌ 2 ಮಿಲಿಯನ್‌ ಡಾಲರ್‌ ಶುಲ್ಕ ವಿಧಿಸುತ್ತಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾದ ಅಲಾಯೆದ್ದೀನ್ ಬೊರೊಜೆರ್ಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನೂ 18.77 ಕೋಟಿ ರೂಪಾಯಿ ಹಲವು ದೇಶಗಳಿಂದ ಪಡೆಯುವ ಮಾರ್ಗವನ್ನು ಇರಾನ್‌ ಹುಡುಕಿದೆ. ಇರಾನ್‌ನಿಂದ ಸರಕುಗಳನ್ನು ಪಡೆಯುವುದರಲ್ಲಿ ಭಾರತ ದೇಶವು ಒಂದಾಗಿದೆ. ಇದರಿಂದ ಭಾರತ ಹಲವಾರು ನಷ್ಟ ಅನುಭವಿಸಿದೆ. ಈ ವೇಳೆ 18.77 ಕೋಟಿ ರೂಪಾಯಿ ಭಾರತಕ್ಕೆ ಅಪಾರವಾಗಿ ಪೆಟ್ಟು ಬೀಳುವ ಸಾಧ್ಯತೆ ಇದೆ ಎನ್ನಬಹುದು. ಇನ್ನೂ 48 ಗಂಟೆಗಳ ಒಳಗೆ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ನಾಶ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇರಾನ್‌ ಈ ರೀತಿಯಲ್ಲಿ ಅಮೆರಿಕಕ್ಕೆ ಕೌಂಟರ್‌ ಕೊಟ್ಟಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.