2026-07-23 09:09:48

Iran hits back at Trump statement | ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು, ದೇಶದಲ್ಲಿ ಪೂರ್ಣ ಏಕತೆ ಇದೆ ಎಂದ ಟೆಹರಾನ್‌ | Speed news kannada

Iran hits back at Trump statement | ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು, ದೇಶದಲ್ಲಿ ಪೂರ್ಣ ಏಕತೆ ಇದೆ ಎಂದ ಟೆಹರಾನ್‌ | Speed news kannada

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲೇ, ಅಮೆರಿಕದ ಅಧ್ಯಕ್ಷ ಟ್ರಂಪ್‌ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಇರಾನ್ ತನ್ನ ನಾಯಕತ್ವದ ಬಗ್ಗೆ ಗೊಂದಲದಲ್ಲಿದೆ ಎಂದು ಟ್ರಂಪ್ ಆರೋಪಿಸಿದರೆ, ಅದನ್ನು ಇರಾನ್ ನಾಯಕರು ತೀವ್ರವಾಗಿ ತಳ್ಳಿಹಾಕಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ದೇಶ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಳಲುತ್ತಿದ್ದು, ತನ್ನ ನಾಯಕನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಜೊತೆಗೆ, ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ ಎಂದು ಟ್ರಂಪ್‌ ಪುನರುಚ್ಚರಿಸಿದ್ದಾರೆ. ಇರಾನ್ ಒಪ್ಪಂದಕ್ಕೆ ಬಗ್ಗುವವರೆಗೂ ನಿರ್ಬಂಧಗಳನ್ನು ತೆಗೆದುಹಾಕುವುದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.‌ ಟ್ರಂಪ್ ಹೇಳಿಕೆಗೆ  ಪ್ರತಿಕ್ರಿಯಿಸಿದ ಇರಾನ್ ಅಧಿಕಾರಿಗಳು, ದೇಶದಲ್ಲಿ ಯಾವುದೇ ರೀತಿಯ ವಿಭಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ, “ಒಂದೇ ದೇವರು, ಒಬ್ಬ ನಾಯಕ, ಒಂದು ರಾಷ್ಟ್ರ” ಎಂಬ ಸಂದೇಶದ ಮೂಲಕ ದೇಶದ ಏಕತೆಯನ್ನು ಒತ್ತಿಹೇಳಿದರು. ಇದೇ ವೇಳೆ, ಸಂಸತ್ ಸ್ಪೀಕರ್, ಇರಾನ್‌ನಲ್ಲಿ ಮತಾಂಧತೆ ಇಲ್ಲ ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವ ಸೈಯ್ಯದ್‌ ಅಬ್ಬಾಸ್‌ ಅರಾಘ್ಚಿ ಕೂಡ ದೇಶದೊಳಗಿನ ವಿಭಜನೆ ಕುರಿತ ಆರೋಪಗಳನ್ನು ತಳ್ಳಿಹಾಕಿ, ಮಿಲಿಟರಿ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಇರಾನ್ ಏಕತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.