ಮೊಜ್ತಾಬಾ ಖಮೇನಿ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಅಮೆರಿಕ ಆರೋಪಗಳನ್ನು ಇರಾನ್ ತಳ್ಳಿಹಾಕಿದೆ. ಅಯತೊಲ್ಲಾ ಮೊಹ್ಸೆನ್ ಕೋಮಿ ಸುಪ್ರೀಂ ನಾಯಕ ಸಂಪೂರ್ಣ ಆರೋಗ್ಯವಾಗಿದ್ದು ಆಡಳಿತ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಬಾಂಬ್ ದಾಳಿ ನಡೆದ ಕಟ್ಟಡದಲ್ಲಿ ಇದ್ದರೂ, ದೇವರ ಕೃಪೆಯಿಂದ ಅವರು ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಫಾರ್ಸ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಖಮೇನಿ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಎಂದು ಇರಾನ್ ತಿಳಿಸಿದೆ.