2026-06-08 04:04:26

Iran attack on Indian oil tanker | ಭಾರತೀಯರಿದ್ದ ಆಯಿಲ್ ಟ್ಯಾಂಕ‌ರ್ ಮೇಲೆ ಇರಾನ್ ದಾಳಿ | Speed News Kannada

Iran attack on Indian oil tanker | ಭಾರತೀಯರಿದ್ದ ಆಯಿಲ್ ಟ್ಯಾಂಕ‌ರ್ ಮೇಲೆ ಇರಾನ್ ದಾಳಿ | Speed News Kannada

ಒಮಾನ್ : ಇಲ್ಲಿನ ಕರಾವಳಿಯ ಬಳಿ ಸಂಚರಿಸುತ್ತಿದ್ದ ಅಮೆರಿಕದ ನಿರ್ಬಂಧಿತ ತೈಲ ಟ್ಯಾಂಕರ್ ಮೇಲೆ ಡೋನ್ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಡಗಿನಲ್ಲಿ 15 ಭಾರತೀಯರು ಇದ್ದು, ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಅವರ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತವಾಗಿದೆ.
ಇದುವರೆಗೂ ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಸಂದಮ್ ಪರ್ಯಾಯ ದ್ವೀಪದ ಸಮೀಪ ಪಲಾವ್ ಧ್ವಜಧಾರಿತ ಟ್ಯಾಂಕ‌ರ್ ಅಪಘಾತಕ್ಕೀಡಾದುದಾಗಿ ಒಮಾನ್‌ನ ಕಡಲ ಭದ್ರತಾ ಕೇಂದ್ರ ತಿಳಿಸಿದೆ. ಈ ದಾಳಿಗೆ ಮೊದಲು ಅರೇಬಿಯನ್ ಸಮುದ್ರದ ಡುಕ್ಟ್ ವಾಣಿಜ್ಯ ಬಂದರಲ್ಲೂ ಡೋನ್ ದಾಳಿ ನಡೆದಿತ್ತು. ಇರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ಕ್ರಮಗಳ ಬಳಿಕ ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು ಈ ಘಟನೆಯಿಂದ ಮತ್ತಷ್ಟು ಸ್ಪಷ್ಟವಾಗಿದೆ. ಅಮೆರಿಕಾದ ತೈಲ ಟ್ಯಾಂಕರ್ ಉಡೀಸ್ ಮಾಡಿದ ಇರಾನ್.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.