2026-06-08 01:31:18

Indian economy to cross $5 trillion by 2030 | 2030ಕ್ಕೆ 5 ಟ್ರಿಲಿಯನ್ ಮೀರಲಿದೆ ಭಾರತದ ಆರ್ಥಿಕತೆ: ಸಚಿವ ಪ್ರಹ್ಲಾದ ಜೋಶಿ | Speed News Kannada

Indian economy to cross $5 trillion by 2030 | 2030ಕ್ಕೆ 5 ಟ್ರಿಲಿಯನ್ ಮೀರಲಿದೆ ಭಾರತದ ಆರ್ಥಿಕತೆ: ಸಚಿವ ಪ್ರಹ್ಲಾದ ಜೋಶಿ | Speed News Kannada

ನವದೆಹಲಿ: ಭಾರತ ಅತಿ ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದುತ್ತಿದ್ದು, 2030ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಜ ಸರಬರಾಜು ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸೆಂಟ್ರಲ್ ವೇರ್ ಹೌಸ್ ನ 70ನೇ ಸಂಸ್ಥಾಪನಾ ದಿನದ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಸಮರ್ಥ ನಾಯಕತ್ವ, ದಕ್ಷ ಆಡಳಿತದಲ್ಲಿ ಭಾರತ ಇಂದು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದ್ದು, ಮೂರನೇ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಹೇಳಿದರು.
ಕಳೆದ ಹತ್ತು, ಹನ್ನೆರೆಡು ವರ್ಷಗಳ ಹಿಂದೆ ಭಾರತ 2 ಟ್ರಿಲಿಯನ್ ಆರ್ಥಿಕತೆಯಲ್ಲಿತ್ತು. ಈಗ 4 ಟ್ರಿಲಿಯನ್ ಸನಿಹದಲ್ಲಿದೆ. 2027ರ ವೇಳೆಗೆ 5 ಟ್ರಿಲಿಯನ್ ಹೊಂದಲಿದ್ದು, 2030 ರ ಹೊತ್ತಿಗೆ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುವ ಭರವಸೆಯಲ್ಲಿದೆ ಎಂದು ಹೇಳಿದರು.
ನಮ್ಮ ರಾಷ್ಟ್ರವು ವಿಶ್ವಾಸ, ಭರವಸೆ ಮತ್ತು ಅವಕಾಶದ ನಿರ್ಣಾಯಕ ಕ್ಷಣದಲ್ಲಿ ನಿಂತಿದೆ. ಆರ್ಥಿಕ ಪ್ರಯಾಣ ದಕ್ಷತೆ ಮತ್ತು ಸುಧಾರಣೆಯಲ್ಲಿ ವೇಗದ ಬೆಳವಣಿಗೆ ಕಾಣುತ್ತಿದೆ ಎಂದು ಪ್ರತಿಪಾದಿಸಿದರು. 
ಸೆಂಟ್ರಲ್ ವೇರ್ ಹೌಸ್ ನಿಗಮವು ಆರ್ಥಿಕ ಸಾಧನೆಯಲ್ಲಿ ದಾಖಲೆ ನಿರ್ಮಿಸಿದ್ದು, ಭಾರತದ ಲಾಜಿಸ್ಟಿಕ್ಸ್ ಮತ್ತು ಗೋದಾಮು ವಲಯವನ್ನು ಬಲಪಡಿಸುವಲ್ಲಿ ನಿರಂತರ ಕೊಡುಗೆ ನೀಡುತ್ತಿದೆ. ವಹಿವಾಟು ಮತ್ತು ಲಾಭದಲ್ಲಿ ಹಿಂದಿನ ಮಾನದಂಡಗಳನ್ನು ಮೀರಿ CWC ಬಲವಾದ ಆರ್ಥಿಕತೆ ಮತ್ತು ಕಾರ್ಯತಂತ್ರದ ಮೂಲಕ ಸಾರ್ವಜನಿಕ ವಲಯದ ಪ್ರಮುಖ ಉದ್ಯಮವಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.