2026-03-07 04:01:11

Indian crew member killed in drone attack on oil tanker | ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕ‌ರ್ ಮೇಲೆ ಡ್ರೋನ್ ದಾಳಿ ಭಾರತ ಮೂಲದ ಸಿಬ್ಬಂದಿ ಸಾವು | Speed News Kannada

Indian crew member killed in drone attack on oil tanker | ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕ‌ರ್ ಮೇಲೆ ಡ್ರೋನ್ ದಾಳಿ ಭಾರತ ಮೂಲದ ಸಿಬ್ಬಂದಿ ಸಾವು | Speed News Kannada

ನವದೆಹಲಿ: ಇಸ್ರೇಲ್-ಅಮೆರಿಕದ ಜಂಟಿ ದಾಳಿಗೆ ಇರಾನ್‌ನಿಂದ ಪ್ರತಿಕಾರದ ದಾಳಿ ನಡೆದಿದ್ದು, ಒಮನ್‌ನಲ್ಲಿ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತೈಲ ಟ್ಯಾಂಕರ್ ಮೇಲಿನ ದಾಳಿಯ ಬಗ್ಗೆ ಒಮನ್‌ನಿಂದ ಮಾಹಿತಿ ಲಭ್ಯವಾಗಿದ್ದು, ಸುಲ್ತಾನ್ ಕಬೂಸ್ ಬಂದರು ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ. ಇದರಲ್ಲಿ ಭಾರತೀಯ ಮೃತಪಟ್ಟಿರುವ ಬಗ್ಗೆ ಒಮನ್ ದೃಢಪಡಿಸಿದೆ. ಇದರ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಇರಾನ್ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದು ಅದರಂತೆ ಒಮನ್ ಮೇಲೂ ಇರಾನ್ ದಾಳಿ ನಡೆಸಿದೆ. ಒಮನ್ ಕರಾವಳಿಯಲ್ಲಿ ಮಾನವರಹಿತ ಡೋನ್ ವೊಂದು ಹಡಗು ತೈಲ ಟ್ಯಾಂಕರ್‌ಗೆ ಅಪ್ಪಳಿಸಿದ ಪರಿಣಾಮವಾಗಿ ಸಂಭವಿಸಿದ ಸ್ಫೋಟದಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.
ಈ ಮೂಲಕ ಇರಾನ್- ಇಸ್ರೇಲ್ ನಡುವಿನ ಯುದ್ಧದಲ್ಲಿ ಮೊದಲ ಭಾರತೀಯನ ಸಾವಾಗಿದೆ. ಈ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಯಿತು. ಆದರೆ, ಈ ದುರಂತದಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಓಮನ್ ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್‌ಗೆ ಬಾಂಬ್ ತುಂಬಿದ ಡೋನ್ ಡಿಕ್ಕಿ ಹೊಡೆದು ಭಾರತೀಯ ನಾವಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಓಮನ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಮಸ್ಕತ್ ಬಳಿ ಈ ದಾಳಿ ನಡೆದಿದ್ದು MKD VYOM ಎಂದು ಗುರುತಿಸಲಾದ ಹಡಗು ದಾಳಿಯಲ್ಲಿ ಹಾನಿಗೊಳಗಾಗಿದೆ. ಮೃತ ಸಿಬ್ಬಂದಿ ಭಾರತೀಯ ಪ್ರಜೆ ಎಂದು ಅಧಿಕಾರಿಗಳು ದೃಢಪಡಿಸಿದ್ದು. ಕಾರ್ಯನಿರತ ಪ್ರಾದೇಶಿಕ ಹಡಗು ಕಾರಿಡಾರ್‌ನಲ್ಲಿ ಸಮುದ್ರ ಭದ್ರತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟು ಹಾಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.