ಜಮ್ಮು-ಕಾಶ್ಮೀರ: ಗಂಡೇಬಲ್ ಜಿಲ್ಲೆಯ ಅರಹಮಾ ಪ್ರದೇಶದಲ್ಲಿ ʻಆಪರೇಷನ್ ಅರಹಮಾʼ ಕಾರ್ಯಾಚರಣೆ ಭದ್ರತಾ ಪಡೆಗಳ ಮೂಲಕ ನಡೆಯುತ್ತಿದೆ. ಕಾರ್ಯಾಚರಣೆಯ ಸಮಯದಲ್ಲಿ ಸೇನೆಯು ಓರ್ವ ಉಗ್ರನನ್ನು ಹತ್ಯೆ ಮಾಡಿದ್ದು, ಉಳಿದ ಉಗ್ರರನ್ನು ಶೋಧಿಸುವ ಕಾರ್ಯ ಮುಂದುವರೆಯುತ್ತಿದೆ. ಭದ್ರತಾ ಪಡೆಗಳು ಸ್ಥಳೀಯ ಖಚಿತ ಮಾಹಿತಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದರೂ ಸೇನಾಪಡೆ ದಿಟ್ಟವಾಗಿ ಪ್ರತಿಕ್ರಿಯಿಸಿ ಒಬ್ಬ ಉಗ್ರನನ್ನು ನಾಶಪಡಿಸಿದೆ. ಜಮ್ಮು-ಕಾಶ್ಮೀರ ಪೊಲೀಸ್, CRPF ಮತ್ತು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್‌ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.