2026-07-23 09:13:09

India vs New Zealand Final T20 Battle today..! | ಇಂದು ಭಾರತ vs ನ್ಯೂಜಿಲೆಂಡ್ ಅಂತಿಮ ಟಿ-20 ಕದನ..! | Speed News Kannada

 India vs New Zealand Final T20 Battle today..!  | ಇಂದು ಭಾರತ vs ನ್ಯೂಜಿಲೆಂಡ್ ಅಂತಿಮ ಟಿ-20 ಕದನ..! | Speed News Kannada

ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವಣ 5ನೇ ಹಾಗೂ ಅಂತಿಮ ಟಿ-20 ಪಂದ್ಯ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ನಡೆಯಲಿರುವ ಪಂದ್ಯ ಟಿ-20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಕೊನೆಯ ಪಂದ್ಯವಾಗಿರಲಿದೆ.  ಹೀಗಾಗಿ , ವಿಶ್ವ ಮಿನಿ ಮಹಾ ಸಮರಕ್ಕೂ ಮುನ್ನ ತಮ್ಮ ತಂಡದ ಪ್ಲೇಯಿಂಗ್ ಇಲೆವೆನ್ ಹಾಗೂ ತಂಡದ ಸಂಯೋಜನೆ ಹೇಗಿರಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಟೀಮ್‌ ಇಂಡಿಯಾಗೆ ಇದು ಉತ್ತಮ ಅವಕಾಶ. 

ಈಗಾಗಲೇ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿರುವ ಭಾರತ, 5ನೇ ಟಿ20 ಪಂದ್ಯವನ್ನು ಗೆದ್ದು ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳೋ ತವಕದಲ್ಲಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಲಯದಲ್ಲಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌. ನಾಯಕ ಸೂರ್ಯಕುಮಾರ್ ಯಾದವ್ , ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ.  ಆದರೆ ಸಂಜು ಸ್ಯಾಮ್ಸನ್‌ ಪದೇ ಪದೇ ವಿಫಲರಾಗುತ್ತಿದ್ದು, ಆಯ್ಕೆಗಾರರ ನಿದ್ದೆಗೆಡಿಸಿದ್ದಾರೆ. 

ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಉತ್ತಮ ಫಾರ್ಮ್‌ನಲ್ಲಿದ್ದು, ಫಿನಿಷರ್‌ ಪಾತ್ರವನ್ನು ರಿಂಕು ಸಿಂಗ್‌ ಸಮರ್ಥವಾಗಿ ನಿಭಾಯಿಸುತ್ತದ್ದಾರೆ.  ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾದ ಜಸ್ಪ್ರೀತ್ ಬು̧̧̧̧ಮ್ರಾ, ಅರ್ಶ್‌ದೀಪ್ ಸಿಂಗ್‌, ವರುಣ್‌ ಚಕ್ರವರ್ತಿ ಹಾಗೂ ಸ್ಪಿನ್‌ ಅಸ್ತ್ರಗಳಾದ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮಾರಕ ದಾಳಿಯ ಮೂಲಕ ಕಿವೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬೇಕಿದೆ. 

ಇನ್ನೊಂದೆಡೆ ನಾಲ್ಕನೇ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್‌, ಐದನೇ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಯೋಜನೆಯಲ್ಲಿದೆ. ಸರಣಿ ಈಗಾಗಲೇ ಭಾರತದ ಪಾಲಾಗಿರುವ ಕಾರಣ, ತಂಡದಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದೆ. 

ಇಂದಿನ ಪಂದ್ಯದ ಸಂಭಾವ್ಯ ಭಾರತ ತಂಡ : 

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್/ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ/ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ/ಕುಲದೀಪ್ ಯಾದವ್.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.