2026-07-23 08:17:52

india-us agreement; loss to india; rahulaಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪSpeed News Kannada

india-us agreement; loss to india; rahulaಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪSpeed News Kannada

ನವದೆಹಲಿ: ಭಾರತ-ಅಮೆರಿಕ ನಡುವೆ ನಡೆದಿರುವ ಮಧ್ಯಂತರ ವ್ಯಾಪಾರ ಒಪ್ಪಂದದಿಂದ ದೇಶಕ್ಕೆ ನಷ್ಟವಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಆರೋಪಿಸಿದ್ದಾರೆ.

ಸಾಮಾಜಿಕ ಜಅಲತಾಣ ಎಕ್ಸ್‌ ನಲ್ಲಿ ಅಭಿಪ್ರಾಯ ಹಂಚಿಕೋಂಡಿರುವ ಅವರು, ಮೋದಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಹತ್ತಿ ಬೆಳೆಯುವ ರೈತರುಗೆ ಹಾಗೂ ಜವಳಿ ರಫ್ತುದಾರರ ಮೇಲೆ ಈ ಒಪ್ಪಂದ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಜವಳಿ ರಫ್ತಿಗೆ ಅಮೆರಿಕ ಶೇ. 18 ತೆರಿಗೆ ವಿಧಿಸುತ್ತಿದೆ. ಆದರೆ ನೆರೆಯ ಬಾಂಗ್ಲಾದೇಶದ ಜವಳಿ ರಫ್ತಿಗೆ ಶೂನ್ಯ ಸುಂಕ ವಿಧಿಸುತ್ತಿದೆ. ಅಮೆರಿಕದಿಂದ ಹತ್ತಿ ಆಮದು ಮಾಡಿಕೊಳ್ಳುವುದೂ ಒಪ್ಪಂದದ ಭಾಗವಾಗಿದೆ. ಇದರಿಂದ ದೇಶದ ಹತ್ತಿ ಬೆಳೆಗಾರರಿಗೆ ಅಪಾರ ಹಾನಿಯುಂಟು ಮಾಡುತ್ತದೆ. ಒಂದು ವೇಳೆ ಆಮದು ಮಾಡಿಕೊಳ್ಳದಿದ್ದರೆ ಜವಳಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಅವರು ಹೇಳಿದ್ದಾರೆ.

‘ಶೇ 18 ಸುಂಕ vs ಶೇ 0– ಸುಳ್ಳು ಹೇಳುವುದರಿಲ್ಲಿ ಪ್ರಧಾನಿ ಹಾಗೂ ಅವರ ಸಚಿವ ಸಂಪುಟ ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿ. ಭಾರತ–ಅಮೆರಿಕ ಒಪ್ಪಂದ ಮೂಲಕ ಹತ್ತಿ ಬೆಳೆಗಾರರು ಹಾಗೂ ಜವಳಿ ರಫ್ತುದಾರರಿಗೆ ಹೇಗೆ ಮೋಸ ಮಾಡುತ್ತಿದ್ದಾರೆ ಎಂದು ಎಂದು ನಾನು ವಿವರಿಸುತ್ತೇನೆ ಎಂದೂ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ವ್ಯಾಪಾರ ಒಪ್ಪಂದದಿಂದ ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಕ್ಕೆ ತಳ್ಳಲಿದೆ, ಆರ್ಥಿಕ ಸಂಕಷ್ಟ ಉಂಟಾಗಲಿದೆ. ‘ಮುಂದೆ ಬಾವಿ, ಹಿಂದೆ ಹಳ್ಳಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ  ಎಂದಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.