ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಬೃಹತ್ ಎಲ್‌ಪಿಜಿ ಟ್ಯಾಂಕರ್ ‘ಸರ್ವ ಶಕ್ತಿ’ ಸಂಚರಿಸುತ್ತಿದೆ. 45,000 ಟನ್ ಎಲ್‌ಪಿಜಿ ಸಾಗಿಸುತ್ತಿರುವ ಈ ಹಡಗು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಖರೀದಿಸಿದ ಮಹತ್ವದ ಸರಕು ಹೊತ್ತಿದೆ.ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆ ಈ ಜಲಸಂಧಿಯಲ್ಲಿ ಸಾಗಣೆ ಕಠಿಣವಾಗಿದ್ದು, ಹಡಗುಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಆದರೂ ‘ಸರ್ವ ಶಕ್ತಿ’ ಹಡಗು ವಿಶಾಖಪಟ್ಟಣದತ್ತ ಪ್ರಯಾಣ ಮುಂದುವರಿಸಿದ್ದು, ಮೇ 13ರಂದು ತಲುಪುವ ನಿರೀಕ್ಷೆಯಿದೆ. ಈ ಹಡಗು ಸುರಕ್ಷಿತವಾಗಿ ತಲುಪಿದರೆ, ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯನ್ನು ತಗ್ಗಿಸಲು ಮಹತ್ವದ ನೆರವು ಸಿಗಲಿದೆ