2026-07-23 05:28:23

India forex reserves rise: Total reserves at $703 billion | ಭಾರತದ ಫಾರೆಕ್ಸ್ ರಿಸರ್ವ್ಸ್ ಏರಿಕೆ: ಒಟ್ಟು ರಿಸರ್ವ್ಸ್‌ 703 ಬಿಲಿಯನ್‌ ಡಾಲರ್‌ | Speed news kannada

India forex reserves rise: Total reserves at $703 billion | ಭಾರತದ ಫಾರೆಕ್ಸ್ ರಿಸರ್ವ್ಸ್ ಏರಿಕೆ: ಒಟ್ಟು ರಿಸರ್ವ್ಸ್‌ 703 ಬಿಲಿಯನ್‌ ಡಾಲರ್‌ | Speed news kannada

ಭಾರತದ ವಿದೇಶಿ ವಿನಿಮಯ ಮೀಸಲು ಸಿಧಿ ಏಪ್ರಿಲ್‌ 17ಕ್ಕೆ 703.308 ಬಿಲಿಯನ್‌ ಡಾಲರ್‌ ಮುಟ್ಟಿದೆ. ಆ ಒಂದು ವಾರದಲ್ಲಿ ಮೀಸಲು ನಿಧಿಯಲ್ಲಿ 2,362 ಬಿಲಿಯನ್‌ ಡಾಲರ್‌ನಷ್ಟು ಏರಿಕೆ. ಸತತ ಮೂರನೇ ವಾರ ಫಾರೆಕ್ಸ್‌ ಹೆಚ್ಚಳ ಆಗಿರುವುದು, ಹಿಂದಿನ ವಾರದಲ್ಲಿ ಫಾರೆಕ್ಸ್‌ ರಿಸರ್ವ್ಸ್‌ 3.825 ಬಿಲಿಯನ್‌ ಡಾಲರ್‌ ಏರಿಕೆ ಆಗಿ 700.946 ಬಿಲಿಯನ್‌ ಡಾಲರ್‌ನಷ್ಟು ಇತ್ತು.

ಭಾರತದ ಫಾರೆಕ್ಸ್‌ ರಿಸರ್ವ್ಸ್‌ನಲ್ಲಿ 2ನೇ ಅತಿದೊಡ್ಡ ಪಾಲು ಹೊಂದಿರುವ ಚಿನ್ನದ ಸಂಗ್ರಹ ಈ ವಾರ ಪ್ರಮಖವಾಗಿ  ಏರಿಕೆ ಆಗಿದೆ. 790 ಮಿಲಿಯನ್‌ ಡಾಲರ್‌ಗಳಷ್ಟು ಏರಿದೆ. ಭಾರತ ಮಾತ್ರವಲ್ಲ ಹಲವು ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಸತತವಾಗಿ ಚಿನ್ನದ ಖರೀದಿ ಮಾಡುವುದು ಮುಂದುವರಿದಿದೆ. ಫಾರೆಕ್ಸ್‌ ಮೀಸಲು ನಿಧಿಯನ್ನು ಪ್ರಮುಖ ಭಾಗವಾಗಿರುವ ವಿದೇಶಿ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿದೆ. 1.481 ಬಿಲಿಯನ್‌ಡಾಲರ್‌ಗಳಷ್ಟು ಹೆಚ್ಚಳಗೊಂಡು 557 ಬಿಲಿಯನ್‌ ಡಾಲರ್‌ ಮಟ್ಟ ದಾಟಿದೆ.

ಏಪ್ರಿಲ್ 17ರ ವಾರದಲ್ಲಿ ಏರಿಕೆಯಾದ ಫಾರೆಕ್ಸ್ ನಿಧಿ

ಒಟ್ಟೂ ಏರಿಕೆ 2.362 ಬಿಲಿಯನ್ ಡಾಲರ್

•        ಫಾರೀನ್ ಕರೆನ್ಸಿ ಅಸೆಟ್ (ಎಫ್ಸಿಎ): 1.481 ಬಿಲಿಯನ್ ಡಾಲರ್

•        ಗೋಲ್ಡ್ ರಿಸರ್ವ್ಸ್: 790 ಮಿಲಿಯನ್ ಡಾಲರ್

•        ಎಸ್ಡಿಆರ್: 78 ಬಿಲಿಯನ್ ಡಾಲರ್ ಏರಿಕೆ

•        ಐಎಂಎಫ್ನಲ್ಲಿರುವ ರಿಸರ್ವ್ಸ್: 14 ಮಿಲಿಯನ್ ಡಾಲರ್

ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ (ಏ. 17ಕ್ಕೆ)

ಒಟ್ಟು ರಿಸರ್ವ್ಸ್: 703.308 ಬಿಲಿಯನ್ ಡಾಲರ್

•        ಫಾರೀನ್ ಕರೆನ್ಸಿ: 557.463 ಬಿಲಿಯನ್ ಡಾಲರ್

•        ಗೋಲ್ಡ್ ರಿಸರ್ವ್ಸ್: 122.133 ಬಿಲಿಯನ್ ಡಾಲರ್

•        ಎಸ್ಡಿಆರ್: 18.841 ಬಿಲಿಯನ್ ಡಾಲರ್

•        ಐಎಂಎಫ್ನಲ್ಲಿ ರಿಸರ್ವ್ಸ್: 4.87 ಬಿಲಿಯನ್ ಡಾಲರ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳಿವು

1.        ಚೀನಾ: 3.64 ಟ್ರಿಲಿಯನ್ ಡಾಲರ್

2.        ಜಪಾನ್: 1.39 ಟ್ರಿಲಿಯನ್ ಡಾಲರ್

3.        ಸ್ವಿಟ್ಜರ್ಲ್ಯಾಂಡ್: 1.077 ಟ್ರಿಲಿಯನ್ ಡಾಲರ್

4.        ರಷ್ಯಾ: 755 ಬಿಲಿಯನ್ ಡಾಲರ್

5.        ಭಾರತ: 703 ಬಿಲಿಯನ್ ಡಾಲರ್

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.