2026-03-07 01:44:06

India America Russia A New Game Of Oil Diplomacy! | ಭಾರತ ಅಮೆರಿಕ ರಷ್ಯಾ ತೈಲ ರಾಜತಾಂತ್ರಿಕತೆಯ ಹೊಸ ಆಟ! | Speed News Kannada

India America Russia A New Game Of Oil Diplomacy! | ಭಾರತ ಅಮೆರಿಕ ರಷ್ಯಾ ತೈಲ ರಾಜತಾಂತ್ರಿಕತೆಯ ಹೊಸ ಆಟ! | Speed News Kannada

ನವದೆಹಲಿ: ಭಾರತವು ಯಾವುದೇ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು. ರಷ್ಯಾ  ಕೇವಲ ಭಾರತಕ್ಕೆ ಮಾತ್ರ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತಿಲ್ಲ. ಯಾವುದೇ ದೇಶ ಯಾವುದೇ ದೇಶದಿಂದ ಬೇಕಿದ್ದರೂ ತೈಲ ಖರೀದಿಸಲು ಸ್ವತಂತ್ರವಾಗಿರುತ್ತದೆ ಎಂದು ರಷ್ಯಾ ಹೇಳಿದೆ. ಭಾರತದ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಭಾರತ ಏನೇ ತಿರ್ಮಾನ ತೆಗೆದುಗೊಂಡರೂ ಅದು ಸರಿಯಾಗಿಯೇ ಇರುತ್ತದೆ. ಇದರಲ್ಲಿ ಹೊಸತೇನಿಲ್ಲ ಎಂದೂ ಹೇಳಿದೆ. ರಷ್ಯಾ ಅಧ್ಯಕ್ಷ ಪುಟಿನ್‌ ಅವರು  ಇಂಧನ ಸಂಬಂಧಗಳಲ್ಲಿ ಭಾರತದ ಜೊತೆ ರಷ್ಯಾ ದೃಢವಾಗಿ ನಿಂತಿದೆ ಎಂದು ತಿಳಿಸಿದ್ದಾರೆ.
ರಷ್ಯಾದ ವಕ್ತಾರ ಡಿಮಿತ್ರಿ ಪೆಸ್ಕೊ ಮಾತನಾಡಿ ರಷ್ಯಾವು ಭಾರತಕ್ಕೆ 15 ಲಕ್ಷ ಬ್ಯಾರಲ್‌ ನಿಂದ 20 ಲಕ್ಷ ಬ್ಯಾರೆಲ್ ವರೆಗೆ ತೈಲ ರಫ್ತು ಮಾಡುತ್ತಿದೆ. ಈ ಪ್ರಮಾಣದಲ್ಲಿ ತೈಲ ರಫ್ತು ಮಾಡಲು ಅಮೆರಿಕಕ್ಕೆ ಸಾಧ್ಯವಿಲ್ಲ. ಅಲ್ಲದೆ ಅಮೆರಿಕದ ಬಳಿ ಇರುವ ಶೆಲ್‌ ಕಚ್ಚಾ ತೈಲವು (ಸಾಮಾನ್ಯ ಕಚ್ಚಾ ತೈಲಕ್ಕಿಂತ ಸಾರಜನಕ ಮತ್ತು ಗಂಧಕದ ಪ್ರಮಾಣ ಹೆಚ್ಚಿರುವ ಕಚ್ಚಾ ತೈಲ) ಸಾಂದ್ರೀಕೃತ ಅನಿಲದ ರೀತಿಯಲ್ಲಿರುತ್ತವೆ. ಭಾರತವು ಇದನ್ನು ಇತರೆ ಕಚ್ಚಾ ತೈಲದೊಂದಿಗೆ ಮಿಶ್ರಣ ಮಾಡಲೇ ಬೇಕಾಗುತ್ತದೆ. ಇದು ಭಾರತಕ್ಕೆ ಹೊರೆಯಾಗುತ್ತದೆ ಎಂದು ತಿಳಿಸಿದ್ದಾರೆ. ಅಮೆರಿಕ ಈ ಹಿಂದೆ ಭಾರತದಿಂದ ರಫ್ತಾಗುವ ಸರಕುಗಳ ಮೇಲೆ  ಶೇ.50 ರಷ್ಟು ಸುಂಕ ವಿದಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಸುಂಕವನ್ನು ಶೇ.18ಕ್ಕೆ ಇಳಿಸಿರುವುದಾಗಿ ಹೇಳಿಕೆ ನೀಡಿದ್ದರು. ಭಾರತವೂ ಈ ನಿರ್ಧಾರವನ್ನು ಸ್ವಾಗತಿಸಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.