2026-06-25 02:42:45

Indecent behavior by taking off ones pants in front of women | ಮಹಿಳೆಯರ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ | Speed News Kannada

Indecent behavior by taking off ones pants in front of women | ಮಹಿಳೆಯರ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ | Speed News Kannada

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಬಟ್ಟೆ ಬಿಚ್ಚಿ ಮಹಿಳೆಯುವತಿಯ ಮುಂದೆ ಯುವಕರು ಅಸಭ್ಯವಾಗಿ ವರ್ತಿಸಿ, ಆವಾಜ್ ಹಾಕಿರುವ ಘಟನೆ ಬೆಂಗಳೂರಿನ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣ ಕುಟೀರ ಹೋಟೆಲ್ ಪಕ್ಕದಲ್ಲಿರುವ ದಿ ಸೋಡಾ ಫ್ಯಾಕ್ಟರಿ ರೆಸ್ಟೋರೆಂಟ್ ನಲ್ಲಿ ಅಸಭ್ಯ ವರ್ತನೆ ನಡೆದಿದೆ. ಬಟ್ಟೆ ಬಿಚ್ಚಿಕೊಂಡು ರೆಸ್ಟೋರೆಂಟ್ ಒಳಗೆ ಯುವಕರು ಎಂಟ್ರಿ ಕೊಟ್ಟಿದ್ದಾರೆ.ಈ ವೇಳೆ ಫ್ಯಾಮಿಲಿ ಸಮೇತ ರೆಸ್ಟೋರೆಂಟ್‌ ಗೆ ಬಂದಿದ್ದ ಮಹಿಳೆಯೊಬ್ಬರು, ಮಹಿಳೆಯರು, ಯುವತಿಯರು ಇದ್ದಾರೆ ಬಟ್ಟೆ ಹಾಕಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೇ ಜೊತೆಯಲ್ಲಿ ಇದ್ದ ಮತ್ತೊಬ್ಬ ಯುವಕ ಎಲ್ಲಾ ಬಟ್ಟೆ ಬಿಚ್ಚುತ್ತೀನಿ ಎಂದು ಅಸಭ್ಯ ವರ್ತನೆ ತೋರಿದ್ದಾನೆ.
ಇದರಿಂದ ಗಾಬರಿಯಾದ ಕುಟುಂಬ ಸ್ನೇಹಿತರಿಗೆ ಕಾಲ್ ಮಾಡಿದ್ದಾರೆ. ಸ್ನೇಹಿತರು ಸ್ಥಳಕ್ಕೆ ಬರೋ ಒಳಗೆ ಯುವಕರು ಎಸ್ಕೆಪ್ ಆಗಿದ್ದಾರೆ. ಗಾಂಜಾ ಮತ್ತಿನಲ್ಲಿ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.