2026-04-23 09:18:47

Improvement in air quality in the state|ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆ|Speed News Kannada

Improvement in air quality in the state|ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆ|Speed News Kannada

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಹದಗೆಟ್ಟಿದ್ದ ವಾಯು ಗುಣಮಟ್ಟದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದಿದೆ. ಆದರೂ ತಜ್ಞರು ಇನ್ನೂ ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ. ಹೌದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಏರ್ ಕ್ವಾಲಿಟಿ ಸುಧಾರಿಸಿದರೂ, ಸಂಪೂರ್ಣವಾಗಿ ಸುರಕ್ಷಿತ ಮಟ್ಟಕ್ಕೆ ತಲುಪಿಲ್ಲ. ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟದಲ್ಲಿದ್ದ ಬೆಂಗಳೂರಿನ AQI ಇಂದು 133ಕ್ಕೆ ತಲುಪಿದೆ.


ಮಂಗಳೂರು, ಉಡುಪಿ ಭಾಗಗಳಲ್ಲೂ ಗಾಳಿ ಗುಣಮಟ್ಟದಲ್ಲಿ ತುಸು ಸುಧಾರಣೆ ಕಂಡುಬಂದಿದೆ. ಆದರೆ WHO ಮಾನದಂಡಗಳ ಪ್ರಕಾರ ಈ ಮಟ್ಟ ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ ಮಿಶ್ರ ಸ್ಥಿತಿಯಲ್ಲಿದೆ.ಇಂದಿನ AQI ಅಂಕಿಅಂಶಗಳು ಈ ಕೆಳಗಿನಂತಿವೆ –ಬೆಂಗಳೂರು – 133,ಮಂಗಳೂರು – 123, ಮೈಸೂರು – 130,ಬೆಳಗಾವಿ – 71,ಕಲಬುರ್ಗಿ – 99 ಶಿವಮೊಗ್ಗ – 104,ಬಳ್ಳಾರಿ – 154,ಹುಬ್ಬಳ್ಳಿ- 88,ಉಡುಪಿ – 118,ವಿಜಯಪುರ – 124, ಇದಲ್ಲದೆ, ಬಳ್ಳಾರಿಯಲ್ಲಿ AQI 154ಕ್ಕೆ ಏರಿಕೆಯಾಗಿ ಅನಾರೋಗ್ಯಕರ ಮಟ್ಟ ತಲುಪಿದೆ.

ಗಾಳಿಯ ಗುಣಮಟ್ಟವನ್ನು ಅಳೆಯುವ ಮಾನದಂಡಗಳ ಪ್ರಕಾರ, 0 ರಿಂದ 50 ಉತ್ತಮ, 50 ರಿಂದ 100 ಮಧ್ಯಮ, 100 ರಿಂದ 150 ಕಳಪೆ, 150 ರಿಂದ 200 ಅನಾರೋಗ್ಯಕರ, 200 ರಿಂದ 300 ಗಂಭೀರ ಮತ್ತು 300ಕ್ಕೂ ಮೇಲಾಗಿದ್ದರೆ ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಸಣ್ಣ ಮಟ್ಟಿನ ಸುಧಾರಣೆ ಕಂಡರೂ, ಆರೋಗ್ಯದ ದೃಷ್ಟಿಯಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.