2026-06-08 01:23:15

Illegal Immigrants | ಅಕ್ರಮ ವಲಸಿಗರ ಗಡಿಪಾರು ಹೇಳಿಕೆಗೆ ಸೀಮಿತವಾಗದಿರಲಿ! | Speed News Kannada

Illegal Immigrants | ಅಕ್ರಮ ವಲಸಿಗರ ಗಡಿಪಾರು ಹೇಳಿಕೆಗೆ ಸೀಮಿತವಾಗದಿರಲಿ! | Speed News Kannada

ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲಾಗುವುದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ರಾಜ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ರಾಜ್ಯದಲ್ಲಿ ಬಾಂಗ್ಲಾದೇಶ ಸಹಿತ ಯಾವುದೇ ವಿದೇಶದ ಅಕ್ರಮ ವಲಸಿಗರಿಗೆ ಸೂರು ಕಲ್ಪಿಸಿಕೊಡುವ ಪ್ರಶ್ನೆಯೇ ಇಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ಪದೇಪದೇ ಇಂತಹ ಹೇಳಿಕೆ ಬರವಸೆ ಸ್ಪಷ್ಟನೆಗಳು ಹೊರ ಬೀಳುತ್ತಿದ್ದರು ವಾಸ್ತವವಾಗಿ ರಾಜ್ಯದಲ್ಲೆಡೆ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿ ವಿವಿಧ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವುದು ಕಂಡು ಬರುತ್ತದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನಾದರೂ ಈ ವಿಷಯವನ್ನು ಹೊಂದಿರವಾಗಿ ಪರಿಗಣಿಸಿ ನುಡಿದಂತೆ ನಡೆಯಬೇಕಿದೆ ಅಂತ ಹೇಳಲಾಗುತ್ತಿದೆ.  ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಕೇವಲ ಕರ್ನಾಟಕ ಅಥವಾ ಬಾಂಗ್ಲಾದ ಗಡಿಭಾಗವಾದ ಪಶ್ಚಿಮ ಬಂಗಾಳ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಸರಿಸುಮಾರು ಕಳೆದ ಒಂದುವರೆ ದಶಕದಿಂದ ಬಾರಿ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರತದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ ಇತ್ತೀಚಿನ ವರ್ಷಗಳಲ್ಲಂತೂ ಬಾಂಗ್ಲಾ ಅಕ್ರಮ ವಲಸಿಗರು ಕಾರ್ಮಿಕ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ದೇಶ ಮತ್ತು ರಾಜ್ಯದಲ್ಲಿ ಪ್ರತಿಯೊಂದು ಚುನಾವಣೆ ಎದುರಾದಾಗಲೂ ಈ ಅಕ್ರಮ ವಲಸಿಗರ ಕುರಿತಂತೆ ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ವಿನಿಮಯ ನಡೆಯುತ್ತಲೇ ಬಂದಿದೆ ಸರ್ಕಾರಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲೆಲ್ಲ ರಾಜಕೀಯ ಮತ್ತು ಧಾರ್ಮಿಕ ಕಾರಣಗಳು ಮುನ್ನೆಲೆಗೆ ಬಂದು ಅದು ಕೇವಲ ಆರಂಭ ಶೂರತನಕ್ಕೆ ಸೀಮಿತವಾಗಿ ಬಿಡುತ್ತಿದೆ. 
ಇನ್ನು ಅಕ್ರಮ ವಲಸಿಗರ ಸಮಸ್ಯೆ ಇದೆ ತೆರನಾಗಿ ಮುಂದುವರೆದಿದ್ದೆ ಆದಲ್ಲಿ ದೇಶದ ಸಾಮಾಜಿಕ ಆರ್ಥಿಕ ಭದ್ರತೆಗೆ ಮಾತ್ರವಲ್ಲದೆ ಜನಸಂಖ್ಯಾ ಶಾಸ್ತ್ರದ ಮೇಲು ನೇತ್ಯಾತ್ಮಕ ಪರಿಣಾಮ ಬೀರಲಿದ್ದು ಸರ್ಕಾರಗಳ ಪಾಲಿಗೆ ಬಲು ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಲ್ಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ದೇಶದಲ್ಲಿ ನೆಲೆಸಿರುವ ಬಾಂಗ್ಲಾದೇಶ ಸಹಿತ ಎಲ್ಲಾ ವಿದೇಶಗಳ ಅಕ್ರಮ ವಲಸಿಗರನ್ನು ಗುರುತಿಸಿ ಅವರೆಲ್ಲರನ್ನು ನಿರ್ದಾಕ್ಷಣೀಯವಾಗಿ ಅವರವರ ದೇಶಗಳಿಗೆ ಗಡಿಪಾರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.