2026-06-08 04:37:00

If you kill our people your destruction is certain | ನಮ್ಮ ಜನರನ್ನು ಕೊಂ*ದರೆ ನಿಮ್ಮ ಸರ್ವನಾಶ ಖಚಿತ ಗುಡುಗಿದ ಅಮೆರಿಕ | Speed News Kannada

If you kill our people your destruction is certain | ನಮ್ಮ ಜನರನ್ನು ಕೊಂ*ದರೆ ನಿಮ್ಮ ಸರ್ವನಾಶ ಖಚಿತ ಗುಡುಗಿದ ಅಮೆರಿಕ | Speed News Kannada

ವಾಷಿಂಗ್ಟನ್ ಡಿಸಿ : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದೆ. ಇಸ್ರೇಲ್, ಅಮೆರಿಕದ (America) ಬೆಂಬಲದೊಂದಿಗೆ ಟೆಹ್ರಾನ್ ಸುತ್ತಮುತ್ತಲಿನ ಪ್ರಮುಖ ತೈಲ ಸಂಸ್ಕರಣಾ ಮತ್ತು ಸಂಗ್ರಹಣಾ ಸೌಲಭ್ಯಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದೆ. ಇದರ ಮಧ್ಯೆ ಇರಾನ್‌ ಗೆ ಅಮೆರಿಕ ಕಠಿಣ ಎಚ್ಚರಿಕೆಯೊಂದನ್ನು ನೀಡಿದೆ.
'ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಯಾವುದೇ ದೇಶವು, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪೀಟ್ ಹೆಗೈತ್ ಎಚ್ಚರಿಕೆ ನೀಡಿದ್ದಾರೆ. ಹೆಗೈತ್ ಕಠಿಣ ಸಂದೇಶದ ಜೊತೆಗೆ 21 ಸೆಕೆಂಡುಗಳ ವಿಡಿಯೊ ಕ್ಲಿಪ್ ಸಹ ಪೋಸ್ಟ್ ಮಾಡಿದ್ದು, ಅದರಲ್ಲಿ ಮಿಲಿಟರಿಯ ದಾಳಿಗಳನ್ನು ಪ್ರದರ್ಶಿಸಲಾಗಿದೆ.
ಅಮೆರಿಕ ಪಡೆಗಳು ಇತ್ತೀಚೆಗೆ ಬಾಂಬ್ ದಾಳಿ ನಡೆಸಿ ನಾಶಪಡಿಸಿದ ವಾಹನಗಳು ಮತ್ತು ಕಟ್ಟಡಗಳ ಚಿತ್ರಗಳ ಸರಣಿಯನ್ನು ಪ್ರದರ್ಶಿಸಲಾಗಿದೆ. ಆದರೆ, ಇವು ಯಾವ ದಾಳಿಯ ದೃಶ್ಯಗಳು ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ, ಅಮೆರಿಕ, ಸದ್ಯ ಇರಾನ್ ವಿರುದ್ಧ ತೀವ್ರ ದಾಳಿ ನಡೆಸುತ್ತಿದೆ. ಇರಾನ್ ಸೋತ ದೇಶ ಎಂದಿದ್ದ ಟ್ರಂಪ್
'ನಾವು ಯುದ್ಧವನ್ನು ಗೆಲ್ಲುತ್ತಿದ್ದೇವೆ. ಇಡೀ ದುಷ್ಟ ಸಾಮ್ರಾಜ್ಯವನ್ನು ನಾಶ ಮಾಡಿದ್ದೇವೆ. 'ಅಮೆರಿಕ ಪಡೆಗಳು ಸಾಧಿಸಿದ ಕಾರ್ಯತಂತ್ರದ ಮಿಲಿಟರಿ ಸಾಧನೆಗಳ ವಿವರವನ್ನು ನೀಡಿದ್ದರು. ಯುದ್ಧವು ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ' ಎಂದು ಟ್ರಂಪ್ ಎಂದಿದ್ದರು. ಇರಾನ್‌ ಸಮುದ್ರ ಮತ್ತು ವೈಮಾನಿಕ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸಲಾಗಿದೆ' ಎಂದು ಹೇಳಿದ್ದರು. ಇರಾನ್ ತೈಲ ಡಿಪೋ ಮೇಲೆ ಇಸ್ರೇಲ್ ದಾಳಿ ಇಸ್ರೇಲ್ ಡಜನ್‌ಗಟ್ಟಲೆ ದೊಡ್ಡ ಸಂಗ್ರಹ ಟ್ಯಾಂಕ್ಸ್, ಡಿಪೋಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಉದ್ದೇಶ ಇರಾನ್‌ನ ದೇಶೀಯ ಇಂಧನ ಪೂರೈಕೆ ಸರಪಳಿಯನ್ನು ಹತ್ತಿಕ್ಕುವುದು. ರಾಜಧಾನಿ ಟೆಹ್ರಾನ್ನ ಹೃದಯಭಾಗದಲ್ಲಿ ನಡೆದ ಈ  ದಾಳಿಗಳು   ಮಿಲಿಟರಿ ಲಾಜಿಸ್ಟಿಕ್ಸ್, ನಾಗರಿಕ ಸಾರಿಗೆ, ವಿದ್ಯುತ್ ಉತ್ಪಾದನೆಗೆ ದೊಡ್ಡ ಹೊಡೆತ ಕೊಟ್ಟಿದೆ.
ಇಸ್ರೇಲ್ ಮ್ಯಾಜಿಕ್..!
ಇರಾನ್ ನಡ ಮುರಿಲು ಇಸ್ರೇಲ್ ಮುಂದಾದಂತೆ ಕಾಣಿದೆ. ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಪ್ರಮುಖ ಸೌಲಭ್ಯಗಳು ಹಾನಿಗೊಳಗಾಗಿವೆ. ಶಹರ್-ಎ ರೇ ಸಂಸ್ಕರಣಾಗಾರ ಸಂಕೀರ್ಣ, ಶಹರ್-ಎ ರೇಯ ಶಹರಾನ್ ಪ್ರದೇಶದ ಡಿಪೋಗಳು, ಕೌಹಕ್ ಮತ್ತು ಕರಾಜ್‌ನಂತಹ ಸೌಲಭ್ಯಗಳು ದಾಳಿಗೆ ಒಳಗಾಗಿವೆ. ಇವು ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನಿರ್ಣಾಯಕ ಗ್ಯಾಸೋಲಿನ್, ಡೀಸೆಲ್ ಮತ್ತು ಮಿಲಿಟರಿಗೆ ಇಂಧನ ವಿತರಣೆಯ ಕೆಲಸ ಮಾಡುತ್ತವೆ. ಇಸ್ರೇಲಿನ ಈ ದಾಳಿಯಿಂದ ಪರ್ಷಿಯಾ ಕಂಗಾಲಾಗಿದೆ.
ಇಸ್ರೇಲ್ ಮಾರಕ ದಾಳಿ. ಚೀನಾ ಕಂಗಾಲು..!
ಖಾರ್ಗ್ ದ್ವೀಪ, ಅಬದಾನ್ ಮತ್ತು ಬಂದರ್ ಅಬ್ಬಾಸ್‌ನಂತಹ ದಕ್ಷಿಣದ ಸಂಸ್ಕರಣಾಗಾರಗಳ ಮೇಲೆ ದಾಳಿ ಆಗಿಲ್ಲ. ಆದ್ದರಿಂದ ಚೀನಾಕ್ಕೆ ಹೋಗುವ ಇರಾನ್‌ನ ಕಚ್ಚಾತೈಲ ರಫ್ತುಗಳ ಮೇಲೆ ಯಾವುದೇ ಪರಿಣಾ, ಬೀರಿಲ್ಲ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ದೊಡ್ಡ ಆಘಾತವನ್ನು ತಪ್ಪಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.