ವಾಷಿಂಗ್ಟನ್: ಕಳೆದ ತಿಂಗಳು ಅಮೆರಿಕದ ಸುಪ್ರೀಂ ಕೋರ್ಟ ತನ್ನ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ್ದರೂ ಸಹ, ತನಗೆ ಸುಂಕಗಳನ್ನು ವಿಧಿಸುವ ಅಧಿಕಾರವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರೆ. ಬೇರೆ ರೂಪದಲ್ಲಿ ಸುಂಕಗಳನ್ನು ವಿಧಿಸಲು ನನಗೆ ಸಂಪೂರ್ಣ ಹಕ್ಕಿದೆ ಮತ್ತು ನಾನು ಈಗಾಗಲೇ ಹಾಗೆ ಮಾಡಲು ಪ್ರಾರಂಭಿಸಿದ್ದೇನೆ ಎಂದು ಅವರು ತಮ್ಮ ಟೂತ್ ಸೋಶಿಯಲ್ ಪ್ಲಾಟ್‌ಫಾರ್ಮ್ ನಲ್ಲಿನ ಸುದೀರ್ಘ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಅಧ್ಯಕ್ಷ ಟ್ರಂಪ್ ಅವರು ಕಾರ್ಯಕಾರಿ ಆದೇಶದ ಮೂಲಕ ಅಮೆರಿಕದ ಆಮದುಗಳ ಮೇಲೆ ಶೇ. 10 ರಷ್ಟು ಸುಂಕವನ್ನು ವಿಧಿಸಿದರು.
ಕಳೆದ ವಾರ ಅಮೆರಿಕ ಸರ್ಕಾರ, ಚೀನಾ, ಐರೋಪ್ಯ ಒಕ್ಕೂಟ (EU) ಮತ್ತು ಜಪಾನ್ ಸೇರಿದಂತೆ 60 ಆರ್ಥಿಕತೆಗಳ ವಿರುದ್ಧ ಹೊಸ ವ್ಯಾಪಾರ ತನಿಖೆಗಳನ್ನು ಆರಂಭಿಸಿದೆ. ಈ ತನಿಖೆಗಳು 'ಬಲವಂತದ ಕಾರ್ಮಿಕ ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯಗಳು' ಮತ್ತು ಅವು ಅಮೆರಿಕದ ವಾಣಿಜ್ಯದ ಮೇಲೆ ಹೊರೆಯಾಗುತ್ತಿವೆಯೇ ಅಥವಾ ನಿರ್ಬಂಧ ಹೇರುತ್ತಿವೆಯೇ ಎಂಬುದನ್ನು ಪರಿಶೀಲಿಸಲಿವೆ.
ಉಭಯ ದೇಶಗಳ ನಡುವೆ ಹೊಸ ಸುತ್ತಿನ ಮಾತುಕತೆಗಳು ಆರಂಭವಾಗುತ್ತಿದ್ದಂತೆಯೇ, ಚೀನಾ ಸರ್ಕಾರವು ವಾಷಿಂಗ್ಟನ್‌ಗೆ 'ತನ್ನ ತಪ್ಪಾದ ಮಾರ್ಗಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವಂತೆ' ಆಗ್ರಹಿಸಿತ್ತು. ಈ ಹೇಳಿಕೆ ಹೊರಬಂದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರ ಈ ಪೋಸ್ಟ್ ಪ್ರಕಟವಾಗಿದೆ. ಅಮೆರಿಕದ ಇತ್ತೀಚಿನ ತನಿಖೆಗಳು 'ಅತ್ಯಂತ ಏಕಪಕ್ಷೀಯ, ಅನಿಯಂತ್ರಿತ ಮತ್ತು ತಾರತಮ್ಯದಿಂದ ಕೂಡಿದವು' ಎಂದು ಟೀಕಿಸಿರುವ ಬೀಜಿಂಗ್‌ನ ವಾಣಿಜ್ಯ ಸಚಿವಾಲಯವು, ವಾಷಿಂಗ್ಟನ್ 'ವ್ಯಾಪಾರ ಅಡೆತಡೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದೆ.
ಚೀನಾ ಮತ್ತು ಅಮೆರಿಕದ ವ್ಯಾಪಾರ ಅಧಿಕಾರಿಗಳು ಭಾನುವಾರ ಪ್ಯಾರಿಸ್‌ನಲ್ಲಿ ಮಾತುಕತೆಗಾಗಿ ಭೇಟಿಯಾಗಿದ್ದಾರೆ. ಈ ಮಾತುಕತೆಯು ಎರಡು ದಿನಗಳ ಕಾಲ ನಡೆಯಲಿದೆ ಎಂದು ವಾಷಿಂಗ್ಟನ್ ತಿಳಿಸಿದೆ. ಸುಪ್ರೀಂ ಕೋರ್ಟ್‌ಗೆ 'ನನ್ನ ನಿಲುವು ಏನೆಂಬುದು ಮತ್ತು ನಮ್ಮ ದೇಶಕ್ಕಾಗಿ ನಾನು ಈ ಗೆಲುವನ್ನು ಎಷ್ಟು ಹಂಬಲಿಸುತ್ತಿದೆ' ಎಂಬುದು ತಿಳಿದಿತ್ತು. ಆದರೂ ಅದು ದಶಕಗಳಿಂದ ಅಮೆರಿಕದ ದುರುಪಯೋಗ ಮಾಡಿಕೊಳ್ಳುತ್ತಿರುವ ದೇಶಗಳಿಗೆ ಮತ್ತು ಕಂಪನಿಗಳಿಗೆ ಕೋಟ್ಯಂತರ ಡಾಲರ್‌ಗಳನ್ನು ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.