2026-06-08 01:31:19

How Bangalore will be prepared for the release of the Toxic trailer | ಟಾಕ್ಸಿಕ್ ಟ್ರೈಲರ್ ರಿಲೀಸ್‌ ಗೆ ಬೆಂಗಳೂರು ಸಜ್ಜು ಹೇಗಿರಲಿದೆ ಈವೆಂಟ್‌ ಗೊತ್ತೇ | Speed News kannada

How Bangalore will be prepared for the release of the Toxic trailer | ಟಾಕ್ಸಿಕ್ ಟ್ರೈಲರ್ ರಿಲೀಸ್‌ ಗೆ ಬೆಂಗಳೂರು ಸಜ್ಜು ಹೇಗಿರಲಿದೆ ಈವೆಂಟ್‌ ಗೊತ್ತೇ | Speed News kannada

“ಟಾಕ್ಸಿಕ್” ಚಿತ್ರದ ಟ್ರೈಲರ್ ಬೆಂಗಳೂರಿನಲ್ಲಿ ಭರ್ಜರಿಯಾಗಿ ರಿಲೀಸ್  ಆಗಲಿದೆ. ಮಾರ್ಚ್ 8 ರಂದು ಭಾನುವಾರ ಟ್ರೈಲರ್ ಬಿಡುಗಡೆಗಾಗಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಇನ್ನು ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅನ್ನು ಓಪನ್ ಗ್ರೌಂಡ್‌ ನಲ್ಲಿ ಮಾಡುತ್ತಿಲ್ಲ, ಬದಲಾಗಿ ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿಯೇ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪತ್ರಕರ್ತರಷ್ಟೇ ಅಲ್ಲದೆ ಬೇರೆ ಭಾಷೆಯ ಸಿನಿಮಾ ಪತ್ರಕರ್ತರೂ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. 
ಮಾರ್ಚ್ 19ಕ್ಕೆ ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಇದು ತೆರೆಗೆ ಬರ್ತಿದೆ. ಗ್ಲೋಬಲ್‌ ಟ್ರೆಂಡ್‌ ಗಮನದಲ್ಲಿಟ್ಟುಕೊಂಡೇ ಈ ಚಿತ್ರ ನಿರ್ಮಿಸಲಾಗಿದೆ. ಈ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಕನ್ನಡ ಇಂಡಸ್ಟ್ರಿಯನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.
ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಚಿತ್ರ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ. ಹಾಗಾಗಿಯೇ ಬಾಕ್ಸ್ ಆಫೀಸ್ ಅಲ್ಲಿ ಫೈಟ್ ಪಕ್ಕಾ ಅನ್ನುವ ಅಂದಾಜು ಇದೆ. ಈ ಎರಡು ಚಿತ್ರಗಳ ನಿರೀಕ್ಷೆ ಜಾಸ್ತಿನೇ ಇದೆ. ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಕಡಿಮೆ ನಾಲ್ಕು ವರ್ಷ ಆದ್ಮೇಲೆ ಚಿತ್ರರಂಗಕ್ಕೆ ಬರ್ತಿದ್ದಾರೆ. ಕೆಜಿಎಫ್-2 ಚಿತ್ರದಿಂದಲೇ ಭಾರೀ ಸದ್ದು ಮಾಡಿದ್ದರು. ಆದರೆ, ಈ ಸಲ ಇವರ ಗುರಿ ದೊಡ್ಡಮಟ್ಟದಲ್ಲಿಯೇ ಇದೆ ಅಂತ ಹೇಳಬಹುದು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.