2026-07-23 08:30:33

Hindi girls fights in front of the Vidhan Sabha | ಹಿಂದಿ ಹುಡುಗಿಯರ ಗಲಾಟೆ ವಿಧಾನಸೌಧದ ಮುಂದೆ ಡಿಶುಂ ಡಿಶುಂ | Speed News Kannada

Hindi girls fights in front of the Vidhan Sabha | ಹಿಂದಿ ಹುಡುಗಿಯರ ಗಲಾಟೆ ವಿಧಾನಸೌಧದ ಮುಂದೆ  ಡಿಶುಂ ಡಿಶುಂ | Speed News Kannada

ವೀಕೆಂಡ್ ಬಂತು ಅಂದ್ರೆ ಸಾಕು ಬೆಂಗಳೂರಿನ ಸಿಟಿ ಪ್ರವಾಸಿಗರಿಂದ ತುಂಬಿ ತುಳುಕುತ್ತೆ. ನಗರದ ಪ್ರಮುಖ ಆಕರ್ಷಣೆಯಾಗಿರೋ ಕಬ್ಬನ್ ಪಾರ್ಕ್, ವಿಧಾನಸೌಧ ನೋಡಲು ಹಲವು ರಾಜ್ಯಗಳಿಂದ ಜನರು ಬರ್ತಾರೆ. ಹಾಗೇ ವಿಧಾನಸೌಧ ನೋಡಲು ಬಂದ ಹಿಂದಿ ಯುವತಿಯರು ಶಕ್ತಿ ಸೌಧದ ಮುಂದೆ ಕೈ ಕೈ ಮಿಲಾಯಿಸಿ ಹೊಡೆದಾಡಿದ್ದಾರೆ. 
ಭಾನುವಾರ ಹಿನ್ನೆಲೆ ವಿಧಾನಸೌಧಕ್ಕೆ ಹಾಕಿದ್ದ ವಿದ್ಯುತ್ ದೀಪಾಲಂಕಾರ‌ ನೋಡಲು ಬಂದಿದ್ದ ಅನೇಕ ಜನರು. ಈ ವೇಳೆ 2 ಯುವತಿಯರ ಗ್ಯಾಂಗ್ ನಡುವೆ ಕಿರಿಕ್ ನಡೆದಿದೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಹೊರ ರಾಜ್ಯದ ಯುವತಿಯರು ನಡು ರಸ್ತೆಯಲ್ಲೇ ಒಬ್ಬರಿಗೊಬ್ಬರು ಎಳೆದಾಡಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹಿಂದಿ ಭಾಷೆಯಲ್ಲಿ ಬೈದಾಡಿಕೊಂಡಿದ, ವಿಡಿಯೋ ವೈರಲ್ ಆಗ್ತಿದೆ.
ಸಂಜೆ 6 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ನಂತರ ಅಲ್ಲಿರುವಂತಹ ಸ್ಥಳೀಯರೇ ಯುವತಿಯರನ್ನ ಸಮಾಧಾನ ಮಾಡಿ ಅಲ್ಲಿಂದ ಕಳುಹಿಸಿದ್ದಾರೆ. ವಿಡಿಯೋ ಮಾಡುವ ವಿಚಾರಕ್ಕೆ ಕಿತ್ತಾಟ ನಡೆದಿದೆ ಅನೇಕರು ಇದ್ರ ಮೂಲಕ ಲಕ್ಷಾಂತರ ರೂಪಾಯಿ ದುಡಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಹಾಗೂ ಭಿನ್ನ ಕಂಟೆಂಟ್ ನೀಡುವ ಹುಚ್ಚಿನಲ್ಲಿ ಜನರು ವಿಡಿಯೋ ಗೀಳಿಗೆ ಇಳಿಯುತ್ತಿದ್ದಾರೆ. ಪಬ್ಲಿಕ್ ಪ್ಲೇಸ್ ನಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡಿತಾ ಇದೆ. ಇದಕ್ಕೆ ಫುಲ್ ಸ್ಟಾಪ್ ಯಾವಾಗ ಅನ್ನೋದು ಕಾದು ನೋಡ್ಬೇಕಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.