2026-07-23 09:09:55

Heavy snowfall in Switzerland | ಸ್ವಿಜರ್ಲೆಂಡ್‌ನಲ್ಲಿ ಭಾರೀ ಹಿಮಪಾತ 80 ಪ್ರಯಾಣಿಕರಿದ್ದ ರೈಲು ಹಳಿ ತಪ್ಪಿ ಹಲವರಿಗೆ ಗಾಯ | Speed News Kannada

Heavy snowfall in Switzerland | ಸ್ವಿಜರ್ಲೆಂಡ್‌ನಲ್ಲಿ ಭಾರೀ ಹಿಮಪಾತ 80 ಪ್ರಯಾಣಿಕರಿದ್ದ ರೈಲು ಹಳಿ ತಪ್ಪಿ ಹಲವರಿಗೆ ಗಾಯ | Speed News Kannada

ನವದೆಹಲಿ, ಫೆಬ್ರವರಿ 16. ಸ್ವಿಸ್ ಆಲ್ಡ್‌ನಲ್ಲಿ ಹಿಮಪಾತ (Avalanche) ಅಪ್ಪಳಿಸಿದ ನಂತರ ದಕ್ಷಿಣ ಸ್ಪಿಟ್ಟರ್‌ಲ್ಯಾಂಡ್‌ನಲ್ಲಿ ಇಂದು ಮುಂಜಾನೆ ರೈಲು ಹಳಿತಪ್ಪಿತು. ಈ ರೈಲಿನಲ್ಲಿ 80 ಜನರು ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
“ಹಿಮಪಾತದಿಂದಾಗಿ ಗೋಪೆನ್‌ಸ್ಟೈನ್ ಮತ್ತು ಬ್ರಿಗ್ ನಡುವೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ" ಎಂದು ಫೆಡರಲ್ ರೈಲು ಆಪರೇಟರ್ CFF ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸ್ಥಳೀಯ ಸುದ್ದಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸ್ಥಳೀಯ ಸಮಯ ಸಂಜೆ 4 ಗಂಟೆಯವರೆಗೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಸ್ಮಾಕ್‌ಗ್ರಾಬೆನ್‌ ಪ್ರದೇಶದಲ್ಲಿ ಹಲವಾರು ಬೋಗಿಗಳು ಹಳಿತಪ್ಪಿದಾಗ ಸ್ಥಳೀಯ ಸಮಯ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೈಲು ನಿರ್ವಾಹಕ ಬರ್ನ್-ಲೋಟ್ಸ್ ಬರ್ಗ್-ಸಿಂಪ್ಲಾನ್ (BLS) ಪ್ರಕಾರ, ಈ ರೈಲು ಬೆಳಿಗ್ಗೆ 6.12ಕ್ಕೆ ಸ್ಪೀಜ್‌ನಿಂದ ಹೊರಟು ಬ್ರಿಗ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಹಿಮಪಾತ ಸಂಭವಿಸಿದೆ. ಹೀಗಾಗಿ, ರೈಲು ಹಳಿ ತಪ್ಪಿದೆ.ಮಧ್ಯಾಹ್ನದ ವೇಳೆಗೆ 30 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ತುರ್ತು ತಂಡಗಳು ಹಳಿಯಲ್ಲಿದ್ದವರನ್ನು ತಲುಪಲು ಕೆಲಸ ಮಾಡುತ್ತಿದ್ದರಿಂದ ಆಂಬ್ಯುಲೆನ್ಸ್ ಮತ್ತು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಫುಟಿಜೆನ್-ಬ್ರಿಗ್ ಮಾರ್ಗದಲ್ಲಿ ಸೇವೆಗಳನ್ನು ಮಂಗಳವಾರದವರೆಗೆ ಸ್ಥಗಿತಗೊಳಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.