2026-06-08 04:09:26

Hardik Pandyas special birthday wishes for girlfriend Mahika Sharma | ಗೆಳತಿ ಮಹಿಕಾ ಶರ್ಮಾ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಸ್ಪೆಷಲ್ ವಿಶ್ | Speed News Kannada

Hardik Pandyas special birthday wishes for girlfriend Mahika Sharma | ಗೆಳತಿ ಮಹಿಕಾ ಶರ್ಮಾ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಸ್ಪೆಷಲ್ ವಿಶ್ | Speed News Kannada

ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕಳೆದ ವರ್ಷ ನತಾಶಾ ಸ್ಟ್ರಾಂಕೋವಿಕ್ ಜೊತೆಗೆ ಹಾರ್ದಿಕ್ ಪಾಂಡ್ಯ ವಿಚ್ಚೇದನ ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ಸುದ್ದಿಯಾಗಿದ್ದರು. 

ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ ನಟಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಅವರು ಮಹಿಕಾ ಶರ್ಮಾ ಜೊತೆ ಸಂಬಂಧದಲ್ಲಿರುವುದಾಗಿಯೂ ದೃಢಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.ಆಗಾಗ್ಗೆ ಗೆಳತಿ ಮಹಿಕಾ ಶರ್ಮಾ ಅವರೊಟ್ಟಿಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಮಹಿಕಾ ಶರ್ಮಾ ಇದೀಗ ಮಹಿಕಾ ಶರ್ಮಾ ಅವರ ಹುಟ್ಟುಹಬ್ಬದ ನಿಮಿತ್ತ ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ. ಈಜುಕೊಳದಲ್ಲಿ ಮಹಿಕಾ ಅವರನ್ನು ತಬ್ಬಿಕೊಂಡ ಫೋಟೊವನ್ನು ಹಂಚಿಕೊಂಡಿರುವ ಹಾರ್ದಿಕ್, 'ಹ್ಯಾಪಿ ಬರ್ತ್‌ ಡೇ ಮೈ ಪ್ರಿನ್ಸೆಸ್' (Happy birthday my princess) ಎಂದು ಬರೆದುಕೊಂಡಿದ್ದಾರೆ. ವಿಶ್ವಕಪ್‌ನಂತಹ ಟೂರ್ನಿಯ ನಡುವೆಯೂ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಕಡೆ ಕೂಡ ಗಮನಹರಿಸುತ್ತಿದ್ದಾರೆ.
ಮಹಿಕಾ ಅವರ ಹುಟ್ಟುಹಬ್ಬಕ್ಕೂ ಮೊದಲು, ಅಂದರೆ ಪ್ರೇಮಿಗಳ ದಿನದಂದು ಹಾರ್ದಿಕ್ ಪಾಂಡ್ಯ ತಮ್ಮ ಕತ್ತಿನ ಹಿಂಭಾಗದಲ್ಲಿ ಟ್ಯಾಟೂವೊಂದನ್ನು ಹಾಕಿಕೊಂಡಿದ್ದರು. ಅದರಲ್ಲಿ ಇಂಗ್ಲಿಷ್‌ನ 'M' ಅಕ್ಷರ ಹಾಗೂ ಎರಡು ಚಿರತೆಗಳ ಚಿತ್ರವಿದೆ. M ಎಂಬುವುದು ಮಹಿಕಾ ಹೆಸರಿನ ಮೊದಲ ಅಕ್ಷರವಾಗಿದೆ. ಅದರ ಅರ್ಥ ಶಕ್ತಿ ಮತ್ತು ಪರಸ್ಪರ ಬೆಂಬಲದ ಸಂಕೇತವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹಾರ್ದಿಕ್ ಪಾಂಡ್ಯ ಹಂಚಿಕೊಂಡ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.