2026-03-07 05:02:20

Gulf War enters 6th day | 6ನೇ ದಿನಕ್ಕೆ ಕಾಲಿಟ್ಟ ಕೊಲ್ಲಿ ಯುದ್ಧ ಅಮೆರಿಕ ಇಸ್ರೇಲ್‌ ಮೇಲೆ ಇರಾನ್ ದಾಳಿ ಪ್ರತಿದಾಳಿ | Speed News Kannada

Gulf War enters 6th day | 6ನೇ ದಿನಕ್ಕೆ ಕಾಲಿಟ್ಟ ಕೊಲ್ಲಿ ಯುದ್ಧ ಅಮೆರಿಕ ಇಸ್ರೇಲ್‌ ಮೇಲೆ ಇರಾನ್ ದಾಳಿ ಪ್ರತಿದಾಳಿ | Speed News Kannada

ದುಬೈ: ಅಮೆರಿಕ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಸಹ ಮುಂಜಾನೆ ಇಸ್ರೇಲ್ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿದೆ.  ಪ್ರತಿಯಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ಮುಂದುವರೆಸಿರುವುದಾಗಿ ಇಸ್ರೇಲ್ ತಿಳಿಸಿದೆ. 
ಇರಾನ್‌ನ ಭದ್ರತಾ ಪಡೆಗಳು ಹಾಗೂ ಕೆಲವು ಸ್ಥಳಗಳ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಿನ್ನೆ ದಾಳಿ ನಡೆಸಿದ್ದವು. ಪ್ರತಿಯಾಗಿ ಇಸ್ರೇಲ್ ಗುರಿಯಾಗಿಸಿ ಇರಾನ್ ದಾಳಿ ನಡೆಸಿತ್ತು.
ಕಳೆದ ಶನಿವಾರ ಯುದ್ಧ ಆರಂಭವಾಗಿದ್ದು, ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಅವರ ಕುಟುಂಬದ ಸದಸ್ಯರು ಮತ್ತು ಹಲವು ನಾಯಕರು ಹತರಾಗಿದ್ದರು. ಅಂದಿನಿಂದ ಇದುವರೆಗೂ ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ರಾಜಧಾನಿ ಟೆಲ್ ಅವಿವ್ ಹಾಗೂ ಜೆರುಸಲೇಂ ಪಟ್ಟಣಗಳಲ್ಲಿ ಸ್ಫೋಟದ ಸದ್ದು ಕೇಳಿಸುತ್ತಲೇ ಇದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.