2026-03-07 03:56:10

Gulbarga gears up for Khelo India Winter Games | ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ಗೆ ಸಜ್ಜಾದ ಗುಲ್ಬರ್ಗ್ | Speed News Kannada

Gulbarga gears up for Khelo India Winter Games | ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ಗೆ ಸಜ್ಜಾದ ಗುಲ್ಬರ್ಗ್ | Speed News Kannada

ಗುಲ್ಮಾರ್ಗ್, ಫೆಬ್ರವರಿ 17 ಫೆಬ್ರವರಿಯ ತಂಪಾದ ಬೆಳಗಿನ ಹೊತ್ತಿನಲ್ಲಿ ಪ್ರೇಕ್ಷಕರು ಬರುವ ಮೊದಲು ಹಾಗೂ ಗೇಟ್‌ಗಳು ತೆರೆಯುವ ಮುನ್ನ ಭಾರತದ ಚಳಿಗಾಲದ ಕ್ರೀಡಾಪಟುಗಳು ಗುಲ್ಬರ್ಗ್‌ನಲ್ಲಿ ಹಿಮದಿಂದ ಆವೃತವಾದ ಇಳಿಜಾರುಗಳಲ್ಲಿ ಅಭ್ಯಾಸ ಆರಂಭಿಸುತ್ತಿದ್ದಾರೆ.
ಗೊಂಡೋಲಾದ ಸದ್ದು, ಪೈನ್ ಮರಗಳ ಮಧ್ಯೆ ಹಿಮದ ನಿಶ್ಯಬ್ದ ವಾತಾವರಣ ಹಾಗೂ ಪಿರ್ ಪಂಜಾಲ್‌ ಪರ್ವತಶ್ರೇಣಿಯ ಸೂರ್ಯೋದಯದ ದೃಶ್ಯ ಇವೆಲ್ಲವೂ ಆರನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ಗೆ ಸಿದ್ಧತೆ ಮಾಡುವವರಿಗೆ ಪ್ರೇರಣೆಯಾಗಿವೆ. ಈ ಪಂದ್ಯಗಳು ಫೆಬ್ರವರಿ 23ರಿಂದ 26ರವರೆಗೆ ನಡೆಯಲಿವೆ.
ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ
ಕಳೆದ ತಿಂಗಳು ಲಡಾಖ್‌ನಲ್ಲಿ ನಡೆದ ಐಸ್ ಸ್ಪೋರ್ಟ್ಸ್ ಹಂತದ ಯಶಸ್ಸಿನ ಬಳಿಕ, ಈಗ ಗಮನ ಸಂಪೂರ್ಣವಾಗಿ ಹಿಮದ ಕ್ರೀಡೆಗಳತ್ತ ಸಾಗಿದೆ. ಗುಲ್ಬರ್ಗ್‌ನಲ್ಲಿ ಆಲೈನ್ ಸ್ಟೀಯಿಂಗ್, ನಾರ್ಡಿಕ್ ಸ್ಟೀಯಿಂಗ್, ಸ್ಕಿ-ಮೌಂಟಿನಿಯರಿಂಗ್ ಮತ್ತು ಸ್ಕೋಬೋರ್ಡಿಂಗ್ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುಮಾರು 400 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.
2020ರಿಂದ ನಿರಂತರವಾಗಿ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದರಿಂದ, ಗುಲ್ಬರ್ಗ್ ಭಾರತದಲ್ಲಿನ ಚಳಿಗಾಲದ ಕ್ರೀಡೆಗಳ ಪ್ರಮುಖ ಕೇಂದ್ರವಾಗಿಯೇ ರೂಪುಗೊಂಡಿದೆ. ಇಲ್ಲಿ 8,700 ಅಡಿ ಎತ್ತರದಲ್ಲಿರುವುದರಿಂದ ಕ್ರೀಡಾಪಟುಗಳಿಗೆ ತಂತ್ರದ ಜೊತೆಗೆ ದೈಹಿಕ ಶಕ್ತಿಯೂ ಅಗತ್ಯ. ಎತ್ತರದ ಕಾರಣ ಉಸಿರಾಟದ ತೊಂದರೆ, ತೀವ್ರ ಇಳಿಜಾರುಗಳು ಹಾಗೂ ಬದಲಾಗುವ ಹಿಮದ ಪರಿಸ್ಥಿತಿ ಇವೆಲ್ಲವೂ ದೊಡ್ಡ ಸವಾಲುಗಳಾಗಿವೆ.ಕ್ರೀಡಾಪಟುಗಳು ಎದುರಿಸಬೇಕಾದ ಸವಾಲುಗಳು
ಜಮ್ಮುವಿನ ಅಂಕುಶ್ ಬಜಾಲಾ ಪ್ರಕಾರ, ಗುಲ್ಮರ್ಗ್‌ ಫ್ಲೋಪ್‌ಗಳು ಸಂಪೂರ್ಣ ತರಬೇತಿ ಮೈದಾನದಂತಿವೆ. "ಇಲ್ಲಿ ಕಾಲುಗಳಿಗೆ ಮಾತ್ರವಲ್ಲ, ಉಸಿರಾಟ ಶಕ್ತಿ, ಸಹನೆಗೂ ತರಬೇತಿ ಸಿಗುತ್ತದೆ,' ಎಂದು ಅವರು ಹೇಳುತ್ತಾರೆ. ಎತ್ತರದ ಕಾರಣದಿಂದ ಕ್ರೀಡಾಪಟುಗಳು ದೇಹ ಮತ್ತು ಮನಸ್ಸು ಎರಡರಲ್ಲೂ ಹೊಂದಿಕೊಳ್ಳಬೇಕಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಹಿಮವಿಲ್ಲದ ಪ್ರದೇಶಗಳಾದ ಹೈದರಾಬಾದ್, ಪುಣೆ, ಇಂದೋರ್, ಕೇರಳ ಹಾಗೂ ಮಧ್ಯಪ್ರದೇಶದಿಂದಲೂ ಕ್ರೀಡಾಪಟುಗಳು ಇಲ್ಲಿ ಭಾಗವಹಿಸುತ್ತಿರುವುದು ಈ ಕೂಟ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕೇರಳದ ಮುಹಮ್ಮದ್ ಸಿನಾನ್ ಅವರ ಪ್ರಕಾರ, "ನಾವು ಹಿಮದ ನಡುವೆ ಬೆಳೆದವರಲ್ಲ. ಆದರೆ ಇಲ್ಲಿ ಬಂದಾಗ ದೇಶದ ದೊಡ್ಡ ತಂಡದ ಭಾಗವಾಗಿರುವ ಅನುಭವ ಸಿಗುತ್ತದೆ," ಎಂದು ಹೇಳಿದರು.
ಕ್ರೀಡಾಪಟುಗಳು ಗುಲ್ಬರ್ಗ್‌ ಇಳಿಜಾರುಗಳನ್ನು ವಿದೇಶಿ ಕ್ರೀಡಾಂಗಣಗಳೊಂದಿಗೆ ಹೋಲಿಸುತ್ತಾರೆ. ಪುಣೆಯ ಹೃಷಿ ಗುಲ್ಮಾನೆ ಅವರಿಗೆ ಮೊದಲಿಗೆ ಎತ್ತರ ಹೊಂದಿಕೊಳ್ಳಲು ಕಷ್ಟವಾಯಿತಾದರೂ ನಂತರ ಅದು ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ರೀಡಾಪಟುಗಳಿಗೆ ಇದು ಮನೆಯಲ್ಲಿಯೇ ನಡೆಯುವ ದೊಡ್ಡ ಪಂದ್ಯವಾಗಿದ್ದು, ಪದಕ ಗೆಲ್ಲುವ ಆಸೆ ಹೆಚ್ಚಿದೆ. ಇತ್ತ ಸೇನಾ ತಂಡವು ಒಟ್ಟಾರೆ ಚಾಂಪಿಯನ್ ಪಟ್ಟವನ್ನು ಕಾಯ್ದುಕೊಳ್ಳಲು ಸಜ್ಜಾಗಿದೆ.
ಈ ಕೂಟವು ಕೇವಲ ಪದಕಗಳಿಗಾಗಿ ಮಾತ್ರವಲ್ಲ, ದೇಶದಲ್ಲಿ ಚಳಿಗಾಲದ ಕ್ರೀಡೆಗಳಿಗೆ ಅಗತ್ಯವಾದ ಮೂಲಸೌಕರ್ಯ, ಪ್ರತಿಭೆ ಗುರುತಿಸುವಿಕೆ ಹಾಗೂ ಮುಂದಿನ ದಿನಗಳಲ್ಲಿ ಬರುವಂತಹ ಸ್ಪರ್ಧಿಗಳಿಗೆ ಪ್ರಮುಖ ವೇದಿಕೆಯಾಗಿದೆ. ನಾಲ್ಕು ದಿನಗಳ ಕಾಲ ಗುಲ್ಮರ್ಗ್‌ ಹಿಮದ ಇಳಿಜಾರುಗಳು ಚಾಂಪಿಯನ್‌ಗಳನ್ನು ನಿರ್ಧರಿಸಲಿದೆ. ಜೊತೆಗೆ, ಭಾರತದಲ್ಲಿನ ಚಳಿಗಾಲದ ಕ್ರೀಡೆಗಳ ಬೆಳವಣಿಗೆಯ ಕಥೆಯೂ ಇಲ್ಲಿ ಮುಂದುವರಿಯುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.