2026-03-07 05:15:26

Governments support for those who insulted Shivaji is a disgrace | ಶಿವಾಜಿಗೆ ಅವಮಾನ ಮಾಡಿದವರಿಗೆ ಸರ್ಕಾರದ ಬೆಂಬಲ ನಾಚಿಕೆಗೇಡು ಬಸವರಾಜ ಬೊಮ್ಮಾಯಿ | Speed News kannada

Governments support for those who insulted Shivaji is a disgrace | ಶಿವಾಜಿಗೆ ಅವಮಾನ ಮಾಡಿದವರಿಗೆ ಸರ್ಕಾರದ ಬೆಂಬಲ ನಾಚಿಕೆಗೇಡು ಬಸವರಾಜ ಬೊಮ್ಮಾಯಿ | Speed News kannada

ಬೆಂಗಳೂರು: ಶಿವಾಜಿ ಮಹಾರಾಜರಿಗೆ ಅಗೌರವ ತೋರುವವರಿಗೆ ರಾಜ್ಯ ಕಾಂಗ್ರಸ್ ಸರ್ಕಾರ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು ಬಹಳ ಸ್ಪಷ್ಟ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. 
ಬಾಗಲಕೋಟೆ ಬಸವಣ್ಸನ ಐಕ್ಯ ನಾಡು. ಎಲ್ಲ ಸಮಾಜದವರೂ ಸಾಮರಸ್ಯದಿಂದ ಇರುವಂತ ಜಿಲ್ಲೆ. ಇಂತಹ ಹಿನ್ನೆಲೆ ಇರುವ ಜಿಲ್ಲೆಯಲ್ಲಿ ಧಾರ್ಮಿಕ ಅಂಧರಿಗೆ ಸರ್ಕಾರದ ಆಶ್ರಯ ಸಿಗುವಂತದ್ದು ಅತ್ಯಂತ ಕೇಡಿನ ಸಂಗತಿ. ಇಲ್ಲಿ ನಡೆದಿರುವ ಘಟನೆ  ಕಲ್ಲು ತೂರಾಟ ಮಾಡುವ, ಚಪ್ಪಲಿ ತೂರುವವರಿಗೆ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಕಲ್ಲು ಚಪ್ಪಲಿ ತೂರಿದವರಿಗೆ  ಮತ್ತು ಇದರ ಹಿಂದೆ ಷಡ್ಯಂತ್ರ ಮಾಡಿದವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ನಾಮಕಾವಸ್ತೆ ಬಂಧನ ತೋರಿಸುತ್ತಾರೆ. ತುಷ್ಟಿಕರಣದ ಪರಾಕಾಷ್ಟೆ ಮುಟ್ಟಿದೆ. ಇಲ್ಲಿ ನ್ಯಾಯಕ್ಕೆ, ಧರ್ಮಕ್ಕೆ ನೀತಿಗೆ ಯಾವುದೇ ಬೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇವಲ ತುಷ್ಟೀಕರಣ, ಭಷ್ಟಾಚಾರ, ವಿಭಜಿಸುವವರಿಗೆ ಮಾತ್ರ ಬೆಲೆ ಇದೆ ಎನ್ನುವುದು ಸ್ಪಷ್ಟ. ಈ ಸರ್ಕಾರ ತನ್ನ ಕರ್ತವ್ಯಗಳನ್ನು  ಮರೆತು ರಾಜ್ಯಕ್ಕೆ ದೀರ್ಘಕಾಲ ಹಾನಿಯಾಗುವ  ಕೆಲಸ ಮಾಡುವುದನ್ನು ನೋಡಿದರೆ ಜನರು ಇವರ ವಿರುದ್ದ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.