ಬೆಂಗಳೂರು: ಬಿಯರ್ ಪ್ರಿಯರಿಗೆ ಗುಡ್ ನ್ಯೂಸ್! ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆಗಳು ಮೇ. 11ರಿಂದಲೇ ಜಾರಿಗೆ ಬರುವಂತೆ ಶೇ.20-25 ರಷ್ಟು ಇಳಿಕೆಯಾಗಿದೆ. ರಾಜ್ಯ ಸರ್ಕಾರವು ಬಿಯರ್ ಮತ್ತು ಸ್ಪಿರಿಟ್ಸ್‌ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶೇ.5 ರಷ್ಟು ಆಲ್ಕೊಹಾಲ್ ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.20 ರಿಂದ ಕಡಿಮೆಯಾಗಿದೆ.
ಆದರೆ ಜನಸಾಮಾನ್ಯರು ಬಳಸುವ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಿದೆ.
ಬಿಯರ್ ಬೆಲೆ ಇಳಿಕೆ, ವಿಸ್ಕಿ ಬೆಲೆ ಹೆಚ್ಚಳ:
ಹೊಸ ದರಪಟ್ಟಿಯ ಮೈಲ್ಡ್ ಬಿಯರ್ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಷರ್ ಅಲ್ಟ್ರಾ, ಬಡ್‌ವೈಸರ್, ಯುಬಿ ಎಕ್ಸ್‌ಪೋರ್ಟ್, ಹೈನಿಕನ್ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ 20 ರೂ. ಗಳಿಂದ 75 ರೂ.ವರೆಗೆ ಇಳಿಕೆಯಾಗಿದೆ.
ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ ಶೇ.20 ರಷ್ಟು ಕಡಿಮೆಯಾಗಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ (ಶೇ.43 ಆಲ್ಕೊಹಾಲ್) ಮತ್ತು ಚಿವಾಸ್ ರೀಗಲ್ (ಶೇ.40) ದರವು 5190 ರೂ.ಗಳಿಂದ 4100 ರೂ.ಗೆ ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ aib ತೆರಿಗೆ ನೀತಿಯನ್ನು ಜಾರಿಗೆ ತಂದಿದ್ದು, ಹಿಂದೆ ಇದ್ದ 16 ಸ್ಲ್ಯಾಬ್ ಗಳಿಗೆ ಬದಲಾಗಿ 8 ಸ್ಲ್ಯಾಬ್ ಗಳಿಗೆ ಇಳಿಸಿಲಾಗಿದೆ. ಆರು ದಶಕಗಳಷ್ಟು ಹಳೆಯ ಪದ್ದತಿಗೆ ತಿಲಾಂಜಲಿ ಹಾಡಿದ್ದು, ಮದ್ಯದಲ್ಲಿರುವ ಆಲೋಹಾಲ್ ಅಅಂಶದ ಆಧಾರದ ಮೇಲೆ ತೆರಿಗೆ ವಿಧಿಸುವ ಪದ್ದತಿಯನ್ನು ಅಳವಡಿಸಿಕೊಂಡಿದೆ.