2026-07-23 09:12:27

Good News for Bangalore Women | ಬೆಂಗಳೂರು ಮಹಿಳೆಯರಿಗೆ ಗುಡ್ ನ್ಯೂಸ್ ಪ್ರೇಮಿಗಳ ದಿನದಂದೇ ಆರಂಭವಾಗಲಿದೆ ಸಖಿ ಆಟೋ | Speed News Kannada

Good News for Bangalore Women | ಬೆಂಗಳೂರು ಮಹಿಳೆಯರಿಗೆ ಗುಡ್ ನ್ಯೂಸ್ ಪ್ರೇಮಿಗಳ ದಿನದಂದೇ ಆರಂಭವಾಗಲಿದೆ ಸಖಿ ಆಟೋ | Speed News Kannada

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸಖಿ ಆಟೋ ಎಂಬ ವಿಶೇಷ ಆಟೋ ಆರಂಭವಾಗಲಿದೆ. ಇದೇ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದೆ ಈ ಆಟೋ ಸೇವೆ ಆರಂಭವಾಗಲಿದೆ.ಮಹಿಳಾ ಚಾಲಕಿಯರೇ ಇರಲಿರುವ ಈ ಆಟೋ ಮಹಿಳೆಯರಿಗಾಗಿಯೇ ಕಾರ್ಯನಿರ್ವಹಿಸಲಿದೆ. ಮಹಿಳೆಯರೇ ಮಹಿಳೆಯರಿಗಾಗಿ ಆರಂಭಿಸಲಿರುವ ವಿಶೇಷ ಸಾರಿಗೆ ವ್ಯವಸ್ಥೆ ಇದಾಗಿದೆ. ಸಖಿ ಆಟೋದಲ್ಲಿ ಮೊದಲ 2ಕಿ.ಮೀ.ಗೆ 50 ರೂ. ಶುಲ್ಕವಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ ಇರುತ್ತದೆ. ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ 24 ಗಂಟೆಗಳ ಕಾಲ ವಿಸ್ತರಿಸಲಾಗುತ್ತಿದೆ.
ಪ್ರಸ್ತುತ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ. ಅಲ್ಲಿಯವರೆಗೆ ride.sakhiwomen.in 8 63619 33364 ಮೂಲಕ ಬುಕ್ ಮಾಡಬಹುದು.
ಮುಂದಿನ ದಿನಗಳಲ್ಲಿ ಟ್ರಾನ್ಸ್ ಮಹಿಳೆಯರನ್ನೂ ಚಾಲಕಿಯರನ್ನಾಗಿ ಸೇರಿಸಿಕೊಳ್ಳುವ ಉದ್ದೇಶವನ್ನು ಸಖಿ ಆಟೋ ಸಂಸ್ಥೆ ಹೊಂದಿದೆ.
ಸಖಿ ಆಟೋ ಆರಂಭವಾಗುತ್ತಿರುವುದರ ಹಿಂದೆ 24 ವರ್ಷದ ಉದ್ಯಮಿ ಕೃಷ್ಣವಿ ಪರೇಖ್ ಅವರ ಶ್ರಮವಿದೆ. ಮುಂಬೈನಲ್ಲಿ ಅವರು ಅನುಭವಿಸಿದ ಅಸುರಕ್ಷಿತ ಪ್ರಯಾಣದ ಅನುಭವಗಳೇ ಇಂದು ಸಖಿ ಆಟೋ ಎಂಬ ಮಹಿಳೆಯರಿಗಾಗಿಯೇ ಆರಂಭಿಸಿರುವ ಆಟೋ ಸಂಸ್ಥೆ ಪ್ರಾರಂಭಗೊಳ್ಳಲು ಪ್ರೇರಣೆ. ಸಖಿ ಆಟೋಗೆ ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಸೇರ್ಪಡೆಗೊಂಡಿದ್ದಾರೆ. ಫೆಬ್ರವರಿ 14ರಿಂದ ಬೆಂಗಳೂರು ನಗರದಲ್ಲಿ ಸಖಿ ಆಟೋ ಕಾರ್ಯಾರಂಭವಾಗಲಿದೆ. ಬೆಂಗಳೂರು ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೆ ಇಂತದೊಂದು ಆಟೋ ನಿಜಕ್ಕೂ ಖುಷಿಯ ವಿಚಾರ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.