ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನೆ ಮತ್ತು ಸಮನ್ವಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ “ಓಪನ್ ಹೌಸ್” ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.
ಬೆಂಗಳೂರು ನಗರದಲ್ಲಿನ ಬಳಕೆಯಲ್ಲಿಲ್ಲದ ಸಾರ್ವಜನಿಕ ಜಾಗಗಳನ್ನು ಪುನರುಜ್ಜೀವನಗೊಳಿಸಲು ನಾಗರಿಕರು, ಸಂಸ್ಥೆಗಳು, CSR ಹಾಗೂ NGOಗಳ ಸಹಯೋಗ ಅಗತ್ಯ. ಸಮೂಹ ಸಹಕಾರ ಮತ್ತು ಜನಪಾಲ್ಗೊಳ್ಳುವಿಕೆಯ ಮೂಲಕ ಉತ್ತಮ ಹಾಗೂ ವಾಸಯೋಗ್ಯ ನಗರ ನಿರ್ಮಾಣ ಸಾಧ್ಯ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
“ಬಯಸಿದಂತೆ ಬಯಲು” ಉಪಕ್ರಮ:
ರಸ್ತೆಗಳನ್ನು ಕೇವಲ ಸಂಚಾರ ಮಾರ್ಗಗಳಾಗಿ ಮಾತ್ರವಲ್ಲದೆ ಎಲ್ಲರನ್ನು ಒಳಗೊಂಡ ಜನಕೇಂದ್ರಿತ ಸಾರ್ವಜನಿಕ ಸ್ಥಳಗಳಾಗಿ ಮರುಕಲ್ಪನೆ ಮಾಡುವ ವಿಶಿಷ್ಟ ನಗರಮಟ್ಟದ ಯೋಜನೆ.
ಈಗಾಗಲೇ ಇಂತಹ 250 ಸ್ಥಳಗಳನ್ನು ಗುರುತಿಸಲಾಗಿದ್ದು, 194 ಸ್ಥಳಗಳನ್ನು ಕಾರ್ಯಗತಗೊಳಿಸಲು ಆಯ್ಕೆ ಮಾಡಲಾಗಿದೆ. ಎಲ್ಲ ಐದೂ ನಗರ ಪಾಲಿಕೆಗಳ ಮೂಲಕ ಹಂತ ಹಂತವಾಗಿ ಜಾರಿಮಾಡಲಾಗುತ್ತದೆ.
ಪಾಲಿಕೆವಾರು ಸ್ಥಳಗಳು:
ಕೇಂದ್ರ ಪಾಲಿಕೆಯಲ್ಲಿ 43; ಉತ್ತರ ಪಾಲಿಕೆಯಲ್ಲಿ – 49; ಪೂರ್ವ ಪಾಲಿಕೆಯಲ್ಲಿ 21; ಪಶ್ಚಿಮ ಪಾಲಿಕೆಯಲ್ಲಿ – 31; ದಕ್ಷಿಣ ಪಾಲಿಕೆಯಲ್ಲಿ 50 ಸ್ಥಳಗಳನ್ನು ಗುರುತಿಸಲಾಗಿದೆ.
ಸಭೆಯಲ್ಲಿ ಅಧಿಕಾರಿಗಳು, CSR ಪ್ರತಿನಿಧಿಗಳು, NGOಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.