2026-07-16 02:29:02

Gauri becomes Aamirs third wife | ಅಮೀರ್ ಮೂರನೇ ಪತ್ನಿಯಾಗಿ ಗೌರಿ ಶರಿಯಾ ವಿರುದ್ಧ ಎಂದು ಫತ್ವಾ ಹೊರಡಿಸಿದ ಧರ್ಮಗುರು | SNK

Gauri becomes Aamirs third wife | ಅಮೀರ್ ಮೂರನೇ ಪತ್ನಿಯಾಗಿ ಗೌರಿ ಶರಿಯಾ ವಿರುದ್ಧ ಎಂದು ಫತ್ವಾ ಹೊರಡಿಸಿದ ಧರ್ಮಗುರು | SNK

ಬೆಂಗಳೂರು ಮೂಲದ ಗೌರಿ ಜತೆ ಬಾಲಿವುಡ್‌ ನಟ ಅಮೀರ್‌ ಖಾನ್‌ ಜುಲೈ 5ರಂದು ಮೂರನೇ  ಮದುವೆಯಾಗಿದ್ದಾರೆ. ಖಾಸಗಿಯಾಗಿ ನಡೆದ ಇವರ ವಿವಾಹ ಈಗ ವಿವಾದ ಸೃಷ್ಟಿಸಿದೆ. ಮೂರನೇ ಬಾರಿ ಮದುವೆಯಾಗಿರುವುದಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಅಮೀರ್ ಖಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಶರಿಯಾ ಕಾನೂನಿನ ಅಡಿಯಲ್ಲಿ ಈ ವಿವಾಹವನ್ನು 'ಹರಾಮ್' ಎಂದು ಘೋಷಿಸಿದ್ದಾರೆ. ಉತ್ತರ ಪ್ರದೇಶದ ಶಾಹಿ ಮುಫ್ತಿ ಮುಖ್ಯಸ್ಥ ಮೌಲಾನಾ ಇಬ್ರಾಹಿಂ ಹುಸೇನ್ ಅವರು ಫತ್ವಾ ಹೊರಡಿಸಿದ್ದಾರೆ. 'ಮುಸ್ಲಿಮೇತರ ಮಹಿಳೆಯನ್ನು ವಿವಾಹವಾಗುವುದು ಹರಾಮ್ (ಧರ್ಮಬಾಹಿರ). ಇಸ್ಲಾಮಿಕ್ ಕಾನೂನುಶಾಸ್ತ್ರದ ಪ್ರಕಾರ ಮುಸ್ಲಿಮೇತರ ಮಹಿಳೆಯೊಂದಿಗೆ ಅಂತರ್ ಧರ್ಮೀಯ ವಿವಾಹವಾಗುವುದು ಪಾಪದ ಕೆಲಸ. ಇದನ್ನು ಪಾಪ ಎಂದು ಒಪ್ಪಿಕೊಳ್ಳಲು ನಿರಾಕರಿಸುವವರು ದೇವರ (ಅಲ್ಲಾಹನ) ಮುಂದೆ ಉತ್ತರಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.

ಆಮೀರ್ ಖಾನ್ ಮೂರು ಮದುವೆಯಾಗಿರುವುದರ ಬಗ್ಗೆ ಹೇಳಿರುವ ಅವರು, 'ಒಬ್ಬ ವ್ಯಕ್ತಿ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದರೆ ಪದೇ ಪದೇ ಮದುವೆಯಾಗುವುದು ಮತ್ತು ವಿಚ್ಛೇದನ ಪಡೆಯುವುದು ಸ್ವೀಕಾರಾರ್ಹವಲ್ಲ' ಎಂದಿದ್ದಾರೆ. 'ಅಮೀರ್ ಖಾನ್‌ ಅವರು ಗೌರಿ ಅವರನ್ನು ವಿವಾಹವಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ, ಜತೆಗೆ ಗೌರಿ ಇಸ್ಲಾಂ ಧರ್ಮವನ್ನು ಪಾಲಿಸದ ಕಾರಣ ಶರಿಯಾ ಕಾನೂನನ್ನು ಉಲ್ಲಂಘಿಸಿದಂತೆ' ಎಂದೂ ಹೇಳಿದ್ದಾರೆ.  ಫತ್ವಾ ಹೊರಡಿಸಿರುವ ಬಗ್ಗೆ ಅಥವಾ ಮೌಲಾನಾ ಹೇಳಿಕೆ ಬಗ್ಗೆ  ಅಮೀರ್ ಅಥವಾ ಅವರ ಪಿಆರ್‌ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಅಮೀರ್ ಖಾನ್ ಮೊದಲು ರೀನಾ ದತ್ತಾ ಅವರನ್ನು ವಿವಾಹ ವಾಗಿದ್ದರು. ಇವರು 2002ರಲ್ಲಿ ವಿಚ್ಛೇದನ ಪಡೆದರು. ನಂತರ ಖ್ಯಾತ ಚಿತ್ರನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಇವರಿಬ್ಬರು ಕೂಡ 2021ರಲ್ಲಿ ಪರಸ್ಪರ ಒಪ್ಪಿಗೆಯಿಂದ ದೂರವಾಗಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.