2026-03-07 12:19:33

Gas booking | ಗ್ಯಾಸ್ ಬುಕ್ಕಿಂಗ್ ಇನ್ಮುಂದೆ ಚಟಾ ಫಟ್ ವಾಟ್ಸಾಪ್‌ ನಲ್ಲಿ ಹಾಯ್ ಅಂದ್ರೆ ಸಾಕು ಸಿಲಿಂಡ‌ರ್ ಮನೆ ಬಾಗಿಲಿಗೆ | Speed News Kannada

Gas booking | ಗ್ಯಾಸ್ ಬುಕ್ಕಿಂಗ್ ಇನ್ಮುಂದೆ ಚಟಾ ಫಟ್ ವಾಟ್ಸಾಪ್‌ ನಲ್ಲಿ ಹಾಯ್ ಅಂದ್ರೆ ಸಾಕು ಸಿಲಿಂಡ‌ರ್ ಮನೆ ಬಾಗಿಲಿಗೆ | Speed News Kannada

ಮನೆಯ ಅವಶ್ಯಕ ವಸ್ತುಗಳಲ್ಲಿ 'ಎಲ್‌ಪಿಜಿ' ಗ್ಯಾಸ್ ಸಿಲಿಂಡರ್ ಪ್ರಮುಖವಾದುದು. ಇದು ಇಲ್ಲದಿದ್ದರೆ ಅಡುಗೆಮನೆಯಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಏನನ್ನೇ ಅಡುಗೆ ಮಾಡಬೇಕಿದ್ದರೂ ಗ್ಯಾಸ್ ಸಿಲಿಂಡರ್ ಇರಲೇಬೇಕು, ಇಲ್ಲದಿದ್ದರೆ ತುಂಬಾ ತೊಂದರೆಯಾಗುತ್ತದೆ.ಅದಕ್ಕಾಗಿಯೇ ಅನೇಕರು ಮನೆಯಲ್ಲಿ ಎರಡು ಸಿಲಿಂಡರ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಒಂದು ಸಿಲಿಂಡರ್‌ ಖಾಲಿಯಾದ ತಕ್ಷಣ ಬುಕ್ ಮಾಡಿ, ಎರಡನೆಯದನ್ನು ಸ್ಟಾಕ್
ಇಟ್ಟುಕೊಳ್ಳುತ್ತಾರೆ. ಆದರೆ, ಕೇವಲ ಒಂದು ಸಿಲಿಂಡರ್‌ ಹೊಂದಿರುವವರು ಗ್ಯಾಸ್ ಖಾಲಿಯಾದಾಗ ಸಂಕಷ್ಟಕ್ಕೆ ಸಿಲುಕುತ್ತಾರೆ. ಏಕೆಂದರೆ ಬುಕಿಂಗ್ ಮಾಡಿದ ತಕ್ಷಣ ಗ್ಯಾಸ್ ಮನೆಗೆ ಬರುವುದಿಲ್ಲ, ಅದಕ್ಕೆ ಎರಡು ಅಥವಾ ಮೂರು ದಿನಗಳ ಸಮಯ ಬೇಕಾಗುತ್ತದೆ. ಇನ್ನು ಕೆಲವು ಬಾರಿ ಗ್ಯಾಸ್ ಏಜೆನ್ಸಿಯ ಫೋನ್ ನಂಬ‌ರ್ ಹುಡುಕಿ ಕರೆ ಮಾಡುವುದು ತಲೆನೋವಿನ ಕೆಲಸ, ಕೆಲವೊಮ್ಮೆ ಫೋನ್ ಕನೆಕ್ಟ್ ಆಗದೆ ಬುಕಿಂಗ್ ವಿಳಂಬವಾಗಬಹುದು.
ವಾಟ್ಸಾಪ್ ಸೇವೆಗಳು ಗ್ರಾಸ್‌ ಗ್ರಾಹಕರಿಗಾಗಿ ಕಂಪನಿಗಳು ಈಗ ವಾಟ್ಸಾಪ್ ಸೇವೆಗಳನ್ನು ನೀಡುತ್ತಿವೆ. ಕೇವಲ ವಾಟ್ಸಾಪ್ ನಂಬರ್‌ಗೆ 'ಹಾಯ್' ಎಂದು ಮೆಸೇಜ್ ಮಾಡಿದರೆ ಸಾಕು, ಹಣ ಪಾವತಿಸಿ ಗ್ಯಾಸ್ ಬುಕ್ ಮಾಡಬಹುದು. ಇದರಿಂದ ಫೋನ್ ನಂಬರ್ ಹುಡುಕಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ವಾಟ್ಸಾಪ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಬುಕಿಂಗ್ ಪ್ರಕ್ರಿಯೆ ಮುಗಿಸಬಹುದು. ಸದ್ಯಕ್ಕೆ ಎಲ್ಲಾ ಪ್ರಮುಖ ಗ್ಯಾಸ್ ಕಂಪನಿಗಳು ಈ ಸೌಲಭ್ಯವನ್ನು ಒದಗಿಸುತ್ತಿವೆ.

ಬುಕ್ ಮಾಡುವುದು ಹೇಗೆ
ನಿಮ್ಮ ಮೊಬೈಲ್‌ನಲ್ಲಿ ಗ್ಯಾಸ್ ಕಂಪನಿಯ ಅಧಿಕೃತ ನಂಬರ್ ಸೇವ್ ಮಾಡಿಕೊಳ್ಳಿ.
ವಾಟ್ಸಾಪ್ ಓಪನ್ ಮಾಡಿ ಆ ನಂಬರ್‌ಗೆ 'Hi' ಎಂದು ಮೆಸೇಜ್ ಕಳುಹಿಸಿ.
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
ಮೆನುವಿನಲ್ಲಿರುವ 'Gas Refill' ಆಯ್ಕೆಯನ್ನು ಆರಿಸಿಕೊಳ್ಳಿ.
ನೀವು ಬಯಸಿದರೆ ಆನ್‌ಲೈನ್ ಮೂಲಕ ಹಣ ಪಾವತಿಸಬಹುದು.
ಇಲ್ಲದಿದ್ದರೆ 'Cash on Delivery' ಆಯ್ಕೆಯನ್ನು ಆರಿಸಿಕೊಳ್ಳಿ.
ಗಮನಿಸಿ: ಗ್ಯಾಸ್ ಕನೆಕ್ಷನ್ ಇರುವ ನಿಮ್ಮ ನೋಂದಾಯಿತ (Registered) ಮೊಬೈಲ್
ಸಂಖ್ಯೆಯಿಂದ ಮಾತ್ರ ವಾಟ್ಸಾಪ್ ಮೆಸೇಜ್ ಕಳುಹಿಸಬೇಕು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.